February 17, 2012

Bidar District Daily Crime Update :- 17/02/2012

        ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 17-02-2012


 

ಹುಲಸೂರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 50/2012 ಕಲಂ: 279, 338, 304(ಎ) ಐ.ಪಿ.ಸಿ.:-

ದಿನಾಂಕ 15.02.2012 ರಂದು 2330 ಗಂಟೆ ಅವಧಿಯಲ್ಲಿ ಆರೋಪಿ ಶಿವಾಜಿ ತಂದೆ ಗೋವಿಂದರಾವ ವಯ: 38 ವರ್ಷ, ಇತನು ತನ್ನ ವಾಹನವನ್ನು ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆ ಬದಿಯಲ್ಲಿ ಸ್ಕಿಡ್ ಆಗಿ ಬಿದ್ದುದ್ದರಿಂದ ಹಿಂದೆ ಕುಳಿತ ಶೇಷರಾವ ಇವರಿಗೆ ರಕ್ತಗಾಯಗಳಾಗಿದ್ದು, ಆರೋಪಿ ಚಾಲಕನಿಗೆ ತೀವ್ರ ಗಾಯಗಳಾಗಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಎಂದು ಫಿರ್ಯಾದಿ ಸತೀಷ ತಂದೆ ವಿಠ್ಠಲರಾವ ಮೋರೆ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ. ಗುನ್ನೆ ನಂ. 51/2012 ಕಲಂ 279 ಐ.ಪಿ.ಸಿ :-

ದಿನಾಂಕ 16/02/2012 ರಂದು 1700 ಗಂಟೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ರೋಡ್ ಪೆಟ್ರೋಲಿಂಗ್ ಮಾಡುತ್ತಿರುವಾಗ ಹುಲಸೂರ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಮೇಹಕರ ಕಡೆಯಿಂದ ಒಬ್ಬ ಮೋ.ಸೈಕಲ ಚಾಲಕನು ತನ್ನ ಮೋ.ಸೈಕಲ ಚಾಲಕ ಅತೀ ವೇಗ ಹಾಗೂ ನಿಶ್ಚಕಾಳಜಿತನ ದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬರುತ್ತಿರುವುದನ್ನು ನೋಡಿ ಸದರಿ ಮನುಷ್ಯನಿಗೆ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ವೆಂಕಟೇಶ ತಂಧೆ ಬಾಬುರಾವ ಅಲಗುಡೆ ವಯ: 23 ಜಾ: ಹೊಲಿಯಾ ಉ: ಮೋ,ಸೈ ಸಿಡಿ-100 ನಂ. ಎ.ಪಿ 09/ಸಿ-7399 ನೇದರ ಚಾಲಕ ಸಾ: ಹುಲಸೂರ ಅಂತ ತಿಳಿಸಿದ್ದು ಸದರಿಯವನಿಗೆ ಹಾಗೆ ಬಿಟಲ್ಲಿ ವಾಹನ ಅಪಘಾತವಾಗುವ ಸಂಭವ ಕಂಡು ಬಂದಿದರಿಂದ ಸದರಿಯವನಿಗೆ ದಸ್ತಗಿರಿ ಮಾಡಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮುಡಬಿ ಪೊಲೀಸ್ ಠಾಣೆ ಗುನ್ನೆ ನಂ. 17/12 ಕಲಂ 78(3) ಕೆ.ಪಿ. ಕಾಯ್ದೆ :-

ದಿನಾಂಕ 16-02-2012 ರಂದು 1500 ಗಂಟೆಗೆ ಮೈಸಲಗಾ ಗ್ರಾಮದ ಹನುಮಾನ ಗುಡಿಯ ಹತ್ತಿರ ಇಬ್ಬರೂ ಮಟ್ಕಾ.ಜುಜಾಟ ಆಡಿಸುತ್ತಿದ್ದು ಅವರಲ್ಲಿ ಒಬ್ಬನು ನಾಗಣ್ಣಾ ಇವನು ಸಾರ್ವಜನಿಕರಿಗೆ ಕಲ್ಯಾಣಿ ಮಟ್ಕಾ ಆಡ್ರಿ 1 ರೊಪಾಯಿಗೆ 80 ರೋಪಾಯಿ ಗೆಲ್ಲರಿ ಅಂತ ಚಿರುತ್ತಾ ಜನರಿಂದ ಹಣವನ್ನು ಸಂಗ್ರಹಿಸುತ್ತಿದ್ದನು. ವೀರಣ್ಣಾ ತಂದೆ ಬಸವರಾಜ ಇವನು ಮಟ್ಕಾ ಚೀಟಿಗಳನ್ನು ಬರೆಸಿಕೊಳ್ಳುತ್ತಿದ್ದನು ಸದರಿ ಮಟ್ಕಾ. ಜುಜಾಟಗಾರರ ಮೆಲೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಒಬ್ಬನಿಗೆ ಹಿಡಿದು ಹೆಸರು ವಿಚಾರಿಸಲು ಅವನು ತನ್ನ ಹೆಸರು ವೀರಣ್ಣಾ ತಂದೆ ಬಸವರಾಜ ಹೋಗಾರ ಸಾ; ಮೈಸಲಗಾ ಅಂತ ತಿಳಿಸಿದನು. ಸದರಿಯವನ ಅಂಗ ಶೋಧನೆ ಮಾಡಲು ಎರಡು ಮಟ್ಕಾ. ಚೀಟಿಗಳು. ನಗದು ಹಣ ರೊ.255=00. ಎರಡು ನೌಕಿಯಾ ಮೋಬೈಲ್ . ಒಂದು ಬಾಲ ಪೇನ್. ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

¨sÁ°Ì £ÀUÀgÀ ¥ÉÆ°¸À oÁuÉ ಗುನ್ನೆ
ನಂ. 23/12 ಕಲಂ 279, 337 ಐಪಿಸಿ
ಜೊತೆ 187 .ಎಮ್.ವಿ
ಕಾಯ್ದೆ :-

ದಿನಾಂಕ : 16/02/2012 ರಂದು 1900 ಗಂಟೆಗೆ ಫಿರ್ಯಾದಿ ಶ್ರೀ ನರಸಿಂಗರಾವ ತಂದೆ ಬಾಜಿರಾವ ರವರು ಹಳೆ ಭಾಲ್ಕಿಯಿಂದ ಗಂಜ ಕಡೆ ಬರುತ್ತಿರುವಾಗ ಭಾಲ್ಕಿ ಬೊಂಬಗೊಂಡೇಶ್ವರ ಚೌಕ ಹತ್ತಿರ ಬಂ,ದಾಗ ಭಾಲ್ಕಿ ಬಸ ನಿಲ್ದಾಣ ಕಡೆಯಿಂದ ಒಬ್ಬ ಮೋಟಾರ ಸ್ಯಕಲ ಚಾಲಕ ತನ್ನ ಮೋಟಾರ ಸ್ಯಕಲ ಅತಿ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಕೊಂಡು ಬಂದು ಫಿರ್ಯಾದಿಗೆ ಎದುರಿನಿಂದ ಡಿಕ್ಕಿ ಮಾಡಿ ತನ್ನ ಮೋಟಾರ ಸ್ಯಕಲ ಸಮೇತ ಓಡಿ ಹೋಗಿರುತ್ತಾನೆ ಸದರಿ ಡಿಕ್ಕಿಯಿಂದ ಫಿರ್ಯಾದಿಗೆ ಮೂಗಿನ ಮೇಲೆ ರಕ್ತಗಾಯ , ಬಲಗಣ್ಣಿನ ಕೇಳಗೆ ಗುಪ್ತಗಾಯ ಬಲ ಮೊಳಕಾಲ ಮೇಲೆ ರಕ್ತಗಾಯ ಬಲ ಭುಜದ ಮೇಲೆ ತರಚಿದ ಗಾಯ ಮತ್ತು ಬಲ ತೊಡೆಯ ಮೇಲೆ ಗುಪ್ತಗಾಯವಾಗಿರುತ್ತದೆ . ಎಂದು ನೀಡಿದ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ನೂತನ ನಗರ ಪೊಲೀಸ್ ಠಾಣೆ ಗುನ್ನೆ ನಂ. 37/12 ಕಲಂ 143,365,504,506 ಜೊತೆ 149 ಐ.ಪಿ.ಸಿ. :-

ದಿನಾಂಕ 11-02-2012 ರಂದು ವ್ಮಧ್ಯಾಹ್ನ 1200 ಗಂಟೆಗೆ ಪ್ರದೀಪ ತಂದೆ ಮನೋಹರ ಸ್ವಾಮಿ ಇತನಿಗೆ ನಂದಿ ಕಾಲೋನಿಯಿಂದ ಆರೋಪಿತರಾದ ಮಲ್ಲಿಕಾರ್ಜುನ ತಂದೆ ಗುರಯ್ಯಾ, ಸುವರ್ಣ ತಂದೆ ಮಲ್ಲಿಕಾರ್ಜುನ, ಸುನೀಲಕುಮಾರ ತಂದೆ ಮಲ್ಲಿಕಾರ್ಜುನ, ಶೋಭಾ ಗಂಡ ಮಲ್ಲಿಕಾರ್ಜುನ, ಸಾ|| ಎಲ್ಲರೂ ನಾಗಮಾರಪಳ್ಳಿ, ಪ್ರಭುಲಿಂಗ ತಂದೆ ಶಂಕ್ರೆಪ್ಪಾ ಸಾ|| ಔರಾದ, ಗುರಯ್ಯಾ ತಂದೆ ಗುರುಪಾದಯ್ಯಾ ಸಾ|| ನಾಗಮಾರಪಳ್ಳಿ. ರವರುಗಳು ಪ್ರದೀಪ ಸ್ವಾಮಿ ಇತನಿಗೆ ಅವಾಚ್ಯ ಶಬ್ದಗಳೀಂದ ಬೈಯ್ದು ಜೀವದ ಬೇದರಿಕೆ ಹಾಕಿ ಅಪಹರಿಸಿಕೊಂಡು ಹೋಗಿರುತ್ತಾರೆ. ಕಾರಣವೆನೆಂದರೆ, ಪ್ರದೀಪ ಇತನು ಸುವಣರ್ಾಳ ಜೊತೆ ಲಗ್ನ ಮಾಡಬೇಕು ಎಂದು ಜಬರದಸ್ತಿಯಿಂದ ಅಪಹರಿಸಿಕೊಂಡು ಹೋಗಿರುತ್ತಾರೆ. ಸದರಿ ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ದಿ: 16-02-2012 ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಗುನ್ನೆ ನಂ. 21/12 ಕಲಂ 32, 34 ಕೆ.ಇ. ಕಾಯ್ದೆ :-    

ದಿನಾಂಕ 16/02/2012 ರಂದು ಹಂದಿಕೇರಾ - ಘೋಢವಾಡಿ ರೋಡ , ಕುಮಾರಚಿಂಚೊಳ್ಳಿ ಕ್ರಾಸ್ ಹತ್ತಿರ ಇಬ್ಬರು ವ್ಯಕ್ತಿಗಳು ತಮ್ಮ ಆಧೀನದಲ್ಲಿ ಯಾವುದೇ ಕಾಗದ ಪತ್ರಗಳು ಇಲ್ಲದೆ ಕಳ್ಳ ಸಂತೆಯಲ್ಲಿ ಮಾರಾಟ ಮಾಡಲು ಬೀರ್ ಮತ್ತು ಸರಾಯಿ ಬಾಟಲ್ ಗಳು ಅನಧಿಕೃತವಾಗಿ ಸಾಗಿಸುತಿದ್ದಾರೆ ಅಂತ ಮಾಹಿತಿ ಬಂದಿದ ಮೇರೆಗೆ ಕುಮಾರಚಿಂಚೊಳ್ಳಿ ಕ್ರಾಸ್ ಹತ್ತಿರ ಹೋದಾಗ 1800 ಗಂಟೆಗೆ ಅಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಆಧೀನದಲ್ಲಿ ಪ್ಲಾಸ್ಟಿಕ ಚೀಲಗಳಲ್ಲಿ ವಸ್ತುಗಳು ಇಟ್ಟುಕೊಂಡಿದ್ದು ನೋಡಿ ಕೂಡಲೇ ಜೀಪಿನಿಂದ ಹಿಡಿದು ಅವರಿಗೆ ಹಿಡಿದು ವಿಚಾರಿಸಲು ತಮ್ಮ ಹೆಸರು 1] ಜಿತೇಂದ್ರ ತಂದೆ ವಿಠಲ ಮೇತ್ರೆ ವಯ 35 ವರ್ಷ ಜಾತಿ ಹರಿಜನ , ಕೂಲಿಕೆಲಸ ಸಾಃ ಘೋಢವಾಡಿ ಗ್ರಾಮ 2] ಪೀರಪ್ಪಾ ತಂದೆ ಮಾರುತಿ ಘಂಟೆ ಜಾತಿ ಕಬ್ಬಲಿಗ , ವಯ 40 ವರ್ಷ , ಕೂಲಿಕೆಲಸ ಸಾಃ ಘಾಟಬೋರಾಳ ಅಂತ ತಿಳಿಸಿದ್ದು ಚೀಲದಲ್ಲಿದ್ದ ವಸ್ತುಗಳ ಬಗ್ಗೆ ವಿಚಾರಿಸಲು ಅದರಲ್ಲಿ ಬೀರ ಮತ್ತು ಸರಾಯಿ ಬಾಟಲಗಳು ಇದ್ದ ಬಗ್ಗೆ ತಿಳಿಸಿದ್ದು ಕೂಡಲೇ ಅವುಗಳನ್ನು ತೆರೆವು ಮಾಡಿ ನೋಡಲು 1] ಕಿಂಗ್ ಫಿಶರ್ [ದೊಡ್ಡವು] 2 ಕಾರ್ಟನ್ ಒಟ್ಟು 24 ಬಾಟಲ್ ಗಳು ಅ.ಕಿ. 2100/- ರೂ. 2] ಕಿಂಗ್ ಫಿಶರ್ [ಚಿಕ್ಕದ್ದು ] 1 ಕಾರ್ಟನ್ ಒಟ್ಟು 24 ಬಾಟಲ್ ಗಳು ಅ.ಕಿ. 1150/- ರೂ 3] ಮೆಕಡಾಲ ವಿಸ್ಕಿ 10 ಬಾಟಲಗಳು [180 ಎಮ್.ಎಲ್ ನದ್ದು ] ಅ.ಕಿ. 1000/- ರೂ. 4] ಇಂಪಿರಿಯಲ್ ಬ್ಲೂ ವಿಸ್ಕಿ 6 ಬಾಟಲಗಳು [180 ಎಮ್.ಎಲ್ ನದ್ದು ] ಅ.ಕಿ. 600/- ರೂ. 5] ಯು.ಎಸ್.ವಿಸ್ಕಿ 14 ಬಾಟಲಗಳು [180 ಎಮ್.ಎಲ್ ನದ್ದು ] ಅ.ಕಿ. 700/- ರೂ. ಹೀಗೆ ಒಟ್ಟು ಅಂದಾಜು ಕಿಮ್ಮತ್ತು 5500/- ರೂಪಾಯಿಗಳದ್ದು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬೀದರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 32/12 ಕಲಂ 279, 338 ಐಪಿಸಿ ಜೊತೆ 187 ಐಎಮ್ವಿ ಕಾಯ್ದೆ :-

ದಿನಾಂಕ 17/02/2012 ರಂದು 12:00 ಗಂಟೆಗೆ ಫಿರ್ಯಾದಿಯ ಎಮ,ಡಿ,ಹಾಸೀಮ ಖುರೇಷಿ ತಂದೆ ಎಮ,ಡಿ,ಗೌಸ ಖೂರೇಷಿ 25 ವರ್ಷ ಸಾ/ ಮನೆ,ನಂ 2-2-118 ಮುಸ್ತೈದಾಪೂರ ತನ್ನ ಮೋಟಾರ ಸೈಕಲ ನಂ ಕೆಎ38 ಕೆ 4761 ನೇದ್ದರ ಮೇಲೆ ಬೀದರ ಮಹಾವೀರ ವೃತದ ಕಡೆಯಿಂದ ಸಿ,ಎಮ,ಸಿ ಕಛೇರಿ ಕಡೆಗೆ ಹೋಗುತ್ತಿರುವಾಗ ಎಸ,ಬಿ,ಹೆಚ, ಬ್ಯಾಂಕ ಹತ್ತಿರ ಇದ್ದಾಗ ಹರಳಯ್ಯಾ ವೃತದ ಕಡೆಯಿಂದ ಒಬ್ಬ ಮೋಟಾರ ಸೈಕಲ ನಂ ಕೆಎ38 ಎಲ,3425 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ವೇಗವಾಗಿ ಹಾಗೂ ಅಜಾಗೂರುಕತೆಯಿಂದ ಇತರರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿದರಿಂದ ಅಪಘಾತ ಸಂಭವಿಸಿ ಅಪಘಾತದಿಂದ ಫಿರ್ಯಾದಿಯ ಎಡಗಡೆ ತೆಲೆಗೆ ಕಟ್ಟಾಗಿ ಭಾರಿ ರಕ್ತ ಗಾಯ ಮತ್ತು ಎಡಗಡೆಯ ಕಣ್ಣಿನ ಹುಬ್ಬಿನ ಮೇಲೆ ಮತ್ತು ಕೆಳಗೆ ಕಟ್ಟಾಗಿ ಭಾರಿ ರಕ್ತ ಗಾಯ, ಮೂಗಿನ ಮೇಲೆ ಪೇಟ್ಟಾಗಿ ರಕ್ತ ಗಾಯ ಪಡಿಸಿ ಸದರಿ ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತ ಫಿರ್ಯಾದಿಯ ಹೇಳಿಕೆ ಮೇರೆಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೋಳ್ಳಲಾಗಿದೆ.