February 6, 2012

BIDAR DISTRICT DAILY CRIME UPDATE 06-02-2012

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 06-02-2012

ಹುಲಸೂರ ಪೊಲೀಸ್ ಠಾಣೆ ಗುನ್ನೆ ನಂ. 33/12 ಕಲಂ 87 ಕೆ.ಪಿ. ಕಾಯ್ದೆ :-

ದಿನಾಂಕ 05/02/2012 ರಂದು 1500 ಗಂಟೆಗೆ ಖಚಿತ ಬಾತ್ಮಿ ಮೇರೆಗೆ ಪಿಎಸ್ಐ ರವರು ಸರ್ಕಾರಿ ಶಾಲೆಯ ಆವರಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನ ಇಸ್ಪೀಟ್ ಎಲೆಯ ಅಂದರ ಬಾಹರ ಎಂಬ ನಸೀಬಿನ ಜೂಜಾಟ ಹಣವನ್ನು ಪಣಕ್ಕೆ ಹಚ್ಚಿ ಆಡುತ್ತಿದ್ದಾಗ ದಾಳಿ ಮಾಡಿ ಅವರನ್ನು ಹಿಡಿದು ವಿಚಾರಿಸಲು 1) ದೇವಿದಾಸ ತಂದೆ ಬಾಬುರಾವ ಮಾಸಾಳೆ ವಯ: 23 ವರ್ಷ ಜಾ: ಮರಾಠಾ ಉ: ಒಕ್ಕಲುತನ ಈತನ ವಶದಿಂದ ಜೂಜಾಟಕ್ಕೆ ಬಳಸಿದ 120/- ರೂ ಹಾಗು ಇಸ್ಪೀಟ್ ಎಲೆಗಳು 2) ಧರ್ಮರಾಜ ತಂದೆ ತುಕಾರಾಮ ಗಿರೀಧರ ವಯ: 22 ವರ್ಷ ಜಾ: ಮರಾಠಾ ಉ: ಒಕ್ಕಲುತನ ಈತನ ವಶದಿಂದ ಜೂಜಾಟಕ್ಕೆ ಬಳಸಿದ 80/- ರೂ ಹಾಗು ಇಸ್ಪೀಟ್ ಎಲೆಗಳು 3) ಸುರೇಶ ತಂದೆ ಅಂಬಾಜಿರಾವ ಪವಾರ ವಯ: 22 ವರ್ಷ ಜಾ: ಮರಾಠಾ ಉ: ಒಕ್ಕಲುತನ ಈತನ ವಶದಿಂದ ಜೂಜಾಟಕ್ಕೆ ಬಳಸಿದ 80/- ರೂ ಹಾಗು ಇಸ್ಪೀಟ್ ಎಲೆಗಳು 4) ದಯಾನಂದ ತಂದೆ ಮಾರುತಿ ಬಿರಾದಾರ ವಯ: 22 ವರ್ಷ ಜಾ: ಮರಾಠಾ ಉ: ಒಕ್ಕಲುತನ ಈತನ ವಶದಿಂದ ಜೂಜಾಟಕ್ಕೆ ಬಳಸಿದ 70/- ರೂ ಹಾಗು ಇಸ್ಪೀಟ್ ಎಲೆಗಳು 5) ಅನೀಲ ತಂದೆ ಸುಧರಾಮ ಬಿರಾದಾರ ವಯ: 20 ವರ್ಷ ಜಾ: ಮರಾಠಾ ಉ: ಒಕ್ಕಲುತನ ಈತನ ವಶದಿಂದ ಜೂಜಾಟಕ್ಕೆ ಬಳಸಿದ 60/- ರೂ ಹಾಗು ಇಸ್ಪೀಟ್ ಎಲೆಗಳು 6) ಸಂತೋಷ ತಂದೆ ಮಾಧವರಾವ ಗಿರೀಧರ ವಯ: 21 ವರ್ಷ ಜಾ: ಮರಾಠಾ ಉ: ಒಕ್ಕಲುತನ ಈತನ ವಶದಿಂದ ಜೂಜಾಟಕ್ಕೆ ಬಳಸಿದ 110/- ರೂ ಹಾಗು ಇಸ್ಪೀಟ್ ಎಲೆಗಳು ಎಲ್ಲರೂ ಸಾ: ಸೊಲದಾಪಕಾ ಗ್ರಾಮದವರಿದ್ದು ಎಲ್ಲರ ನಡುವೆ ಒಟ್ಟು ಜುಜಾಟಕ್ಕೆ ಬಳಸಿದ 120/- ರೂ ಹಾಗು ಇಸ್ಪೀಟ್ ಎಲೆಗಳು ಇದ್ದು ಹೀಗೆ ಜುಜಾಟಕ್ಕೆ ಬಳಸಿದ್ದ ಎಲ್ಲಾ ಒಟ್ಟು 640/- ರೂಪಾಯಿ ಹಾಗು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬೀದರ ಮಾರ್ಕೇಟ ಪೊಲೀಸ ಠಾಣೆ ಅಪರಾಧ ಸಂ. 22/2012 ಕಲಂ. 363, 109 ಜೊತೆ 34 ಐಪಿಸಿ :-

ದಿನಾಂಕ 05-02-2012 ರಂದು 1800 ಗಂಟೆಗೆ ಫಿರ್ಯಾದಿ ಶ್ರೀ ಸತ್ತಾರಮಿಯಾ ತಂದೆ ಜಿಲಾನಿಸಾಬ ಮಾಸಲ್ದಾರ, ವಯ 45 ವರ್ಷ, ಉ: ಒಕ್ಕಲುತನ ಜಾತಿ ಮುಸ್ಲಿಂ ಸಾ: ಚಿಕಪೇಟ ತಾ: ಬೀದರ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನಂದರೆ ಫಿರ್ಯಾದಿಯ ಮಗಳಾದ ಸಮರೀನ್ ಇವಳಿಗೆ ಕಾಮಣಿಯಾಗಿದರಿಂದ ದಿನಾಂಕ 01-02-2012 ರಂದು ಮದ್ಯಾನ ಅಂದಾಜು 11:00 ಗಂಟೆಯ ಸಮಯಕ್ಕೆ ಟಿಪ್ಪು ಸುಲ್ತಾನ ಕಾಲೋನಿಯಲ್ಲಿ ಇರುವ ಇನ್ನೋಬ್ಬಳ ಮಗಳಾದ ನಸರೀನ ಗಂಡ ಖಾಜಾಮಿಯಾ ರವರ ಮನೆಯಲ್ಲಿ ಬಿಟ್ಟು, ನಸರೀನ ಮತ್ತು ಅವರ ಅತ್ತೆ ಘುಡುಬೀ ಇವರಿಗೆ ಆಸ್ಪತ್ರೆಗೆ ತೋರಿಸಿಕೊಂಡು ಬರಲು ತಿಳಿಸಿ ಹೋಗಿದ್ದು ಇರುತ್ತದೆ. ದಿನಾಂಕ 01-02-2011 ರಂದು ಮದ್ಯಾನ ಸುಮಾರು 2:00 ಗಂಟೆಯ ಸಮಯಕ್ಕೆ ಬೀದರ ಬಸವೇಶ್ವರ ಸರ್ಕಲ ಹತ್ತಿರ ಇರುವ ಡಾ|| ಹತ್ತಿ ರವರ ಹತ್ತಿರ ತೋರಿಸಿದ್ದು, ಅವರು ಟಿ.ಬಿ ಎಕ್ಸರ ತೆಗೆಸಲು ಹೇಳಿದಾಗ, ಫಿರ್ಯಾದಿ ಅತ್ತೆಯ ಹತ್ತಿರ ಹಣ ಇಲ್ಲದಕ್ಕೆ ಮನೆಗೆ ಹೋಗಿ, ಹಣ ತಂದು ಎಕ್ಸರೆ ಮಾಡಿಸೊಣ ಅಂತ ಅಂದಾಗ ಸಮರೀನ ಇವಳು ನಾನು ಬಸವೇಶ್ವರ ಸರ್ಕಲ ಹತ್ತಿರ ನಿಲ್ಲುತ್ತೆನೆ. ನೀನು ಹಣ ತೆಗೆದುಕೊಂಡು ಬಾ ಅಂತ ನನ್ನ ಅತ್ತೆಗೆ ಹೇಳಿದರಿಂದ ಅತ್ತೆ, ಮತ್ತು ಫಿಯರ್ಾದಿಯ ಇನ್ನೊಬ್ಬ ಮಗಳಾದ ನಸರೀನ ಇವಳನ್ನು ಕರೆದುಕೊಂಡು ಟಿಪ್ಪು ಸುಲ್ತಾನ ಕಾಲೋನಿಗೆ ಬಂದು, ನಸರೀನ ಇವಳಿಗೆ ಬಿಟ್ಟು ಹಣ ತೆಗೆದುಕೊಂಡು, ಮರಳಿ ಬಸವೇಶ್ವರ ಸರ್ಕಲ ಹತ್ತಿರ ಮದ್ಯಾನ 4:00 ಗಂಟೆಗೆ ಬಂದು ನೋಡಲು ಸಮರೀನ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರು ಸಿಗಲಿಲ್ಲ ದಿನಾಂಕ 01-02-2012 ರಂದು ಮದ್ಯಾನ ಅಂದಾಜು 3:00 ಗಂಟೆಗೆ ವಿದ್ಯಾನಗರದಲ್ಲಿರುವ ಪೋಟೊ ಸ್ಪೂಡಿಯೋದಿಂದ ಚಿಕಪೇಟ ಗ್ರಾಮಕ್ಕೆ ಊಟಕ್ಕೆ ಬರುತ್ತಿದ್ದಾಗ ಬಸವೇಶ್ವರ ಸರ್ಕಲ್ ಹತ್ತಿರ ಚೀಕಪೇಟ ಗ್ರಾಮದ ಮೋಹನ ತಂದೆ ಶೆರಣಪ್ಪಾ ಎಕಲಾರೆ ಈತನು ಮತ್ತು ಸಮರೀನ್ ಇಬ್ಬರು ಬಸವೇಶ್ವರ ವೃತ್ತದಿಂದ ಅಂಬೇಡ್ಕರ ವೃತ್ತದ ಕಡೆಗೆ ಹೋಗುತ್ತಿದ್ದರು ಅಂತ ತಿಳಿಸಿದ್ದು ಇರುತ್ತದೆ. ಫಿಯರ್ಾದಿಯ ಮಗಳಾದ ಸಮರೀನ ಇವಳಿಗೆ ಮೊಹನ ಈತನು ಅಪಹರಿಸಿಕೊಂಡು ಹೋಗಿರುತ್ತಾನೆ. ಅದಕ್ಕೆ ಅವರ ತಂದೆ ಶೆರಣಪ್ಪಾ ಮತ್ತು ಅವರ ಕಡೆಯವರ ಕುಮಕ್ಕು ಕಾರಣವಾಗಿರುತ್ತದೆ. ಕಾರಣ ಮೋಹನ ಮತ್ತು ಶೆರಣಪ್ಪಾ ಮತ್ತು ಅವರ ಕಡೆಯವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲು ನೀಡಿದ ಫಿಯರ್ಾದು ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಹುಮನಾಬಾದ ಪೊಲೀಸ್ ಠಾಣೆ ಯು.ಡಿ.ಆರ್.ನಂ. 01/12 ಕಲಂ 174 ಸಿ.ಆರ್.ಪಿ.ಸಿ.:-

ದಿನಾಂಕ 05/02/2012 ರಂದು 1330 ಗಂಟೆಗೆ ಫಿರ್ಯಾದಿ ಶ್ರೀ ಸೈಯ್ಯದ ಸರಫರಾಜ್ ತಂದೆ ಸೈಯ್ಯದ ಇಸ್ಮಾಯಿಲ್ ಮುಜಾವರ ವಯ 24 ವರ್ಷ ಜಾತಿ ಮುಸ್ಲೀಮ್ ಉ-ಲಾರಿ ಚಾಲಕ ನಂ. ಕೆ.ಎ.32/5147 ಸಾಃ ಶಿವಪೂರಗಲ್ಲಿ ಹುಮನಾಬಾದ ಇತನು ಠಾಣೆಗೆ ಹಾಜರಾಗಿ ತನ್ನ ಮೌಖಿಕ ಫಿಯರ್ಾದು ಹೇಳಿಕೆ ಹೇಳಿ ಬರೆಯಿಸಿದ್ದು ಅದರ ಸಾರಾಂಶವೆನೆಂದರೆ ಬಾಬು ತಂದೆ ಫೂಲ್ ಚಂದ ಪವಾರ ವಯ 32 ವರ್ಷ ಜಾತಿ ಲಮಾಣಿ ಸಾಃ ಕಲ್ಲೂರತಾಂಡಾ ತಾಃ ಹುಮನಾಬಾದ ಇತನು ತನ್ನ ಲಾರಿ ನಂ. ಕೆ.ಎ.32/5147 ನೇದರ ಮೇಲೆ ಕ್ಲೀನರ್ ಅಂತ ಕೆಲಸ ಮಾಡುತ್ತಿದ್ದನು. ದಿನಾಂಕ 05/02/2012 ರಂದು 0300 ಗಂಟೆಗೆ ಲಾರಿಯಲ್ಲಿ ಡೀಸಲ್ ತುಂಬಿಸಿಕೊಂಡು ಸದರಿ ಲಾರಿ ಪೆಟ್ರೋಲ್ ಬಂಕಿನ ಹತ್ತಿರ ನಿಲ್ಲಿಸಿ ತನ್ನ ಲಾರಿ ಕ್ಲೀನರ್ ಇತನಿಗೆ ಲಾರಿಯಲ್ಲಿ ಮಲಗಿಕೊಳ್ಳಲು ಹೇಳಿ ತಾನು ತನ್ನ ಮನೆಗೆ ಹೋಗಿ ದಿನಾಂಕ 05/02/2012 ರಂದು 1100 ಗಂಟೆಗೆ ತನ್ನ ಲಾರಿ ಹತ್ತಿರ ಬಂದು ನೋಡಲು ಲಾರಿ ಕ್ಯಾಬಿನ್ನಿನ ಎಡಗಡೆಯ ಬಾಗಿಲು ಲಾಕ್ ಮಾಡಿಕೊಂಡು ಕ್ಲೀನರ್ ಬಾಬು ಒಳಗೆ ಮಲಗಿಕೊಂಡಿದ್ದನು. ಫಿರ್ಯಾದಿ ಎಷ್ಟೋತ್ತಿನ ತನಕ ಬಾಗಿಲು ಬಡಿದು ಎಬ್ಬಿಸಿದರೂ ಏಳಲಿಲ್ಲ. ಆಗ ಫಿಯರ್ಾದಿ ಮತ್ತು ಪ್ರಕಾಶ ತಂದೆ ಸುಭಾಶ ಜಮಾದಾರ ಇಬ್ಬರೂ ಕೂಡಿ ಕಿಟಕಿಯ ಗ್ಲಾಸಿನಿಂದ ನೋಡಿದಾಗ ಸದರಿ ಬಾಬು ಹಾಗೆ ಮಲಗಿಕೊಂಡಿದ್ದನು. ಸದರಿಯವನು ಮಲಗಿದಲ್ಲಿಯೇ ವಾಂತಿ ಮಾಡಿಕೊಂಡಿದ್ದು ಅವನು ಹೃದಯಾಘಾತ [ಹಾರ್ಟ ಅಟ್ಯಾಕ್] ದಿಂದ ಸತ್ತಿರಬಹುದೆಂದು ಅನಿಸುತ್ತದೆ. ಸದರಿಯವನ ಸಾವಿನ ಬಗ್ಗೆ ನಮ್ಮಗೆ ಯಾರ ಮೇಲೂ ಸಂಶಯ ಇರುವುದಿಲ್ಲ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಗುನ್ನೆ ನಂ. 24/12 ಕಲಂ 302 ಐಪಿಸಿ :-

ದಿನಾಂಕ: 05-02-2012 ರಂದು ಮಲ್ಕಾಪೂರ ವಾಡಿ ಗ್ರಾಮದ ಫಿರ್ಯಾದಿ ಅರ್ಜುನ ರವರ ಮಗನಾದ ಝರೆಪ್ಪಾ ವಯ: 18 ವರ್ಷ ಇವನು ಮದರಗಾಂವ ಗ್ರಾಮದ ಬಸಪ್ಪಾ ತಂದೆ ಶರಣಪ್ಪಾ ದಾಡಗೆ ರವರ ದನಗಳನ್ನು ಮೇಯಿಸುತ್ತಿದ್ದು, ಇವನು ದನಗಳನ್ನು ಸರಿಯಾಗಿ ಕಾಯುತ್ತಿಲ್ಲ ಅಂತಾ 05-02-2012 ರಂದು ಸಾಯಾಂಕಾಲ 6 ಗಂಟೆ ಸುಮಾರಿಗೆ ಮದರಗಾಂವ ಶಿವಾರದಲ್ಲಿ ಆರೋಪಿ ಬಸಪ್ಪಾ ದಾಡಗಿ ಇವನು ಝರೆಪ್ಪಾನ ಕೈಗಳು ಕಟ್ಟಿ ಹಾಕಿ ಹೊಡೆ ಬಡೆ ಮಾಡಿ ಭಾರಿಗಾಯ ಗೊಳಿಸಿ ಕೊಲೆ ಮಾಡಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹಳ್ಳಿಖೇಡ ಪೊಲೀಸ್ ಠಾಣೆ ಗುನ್ನೆ ನಂ. 22/2012 ಕಲಂ 323.504 ಐಪಿಸಿ ಮತ್ತು 3 (1) (10) ಎಸ್.ಸಿ ಎಸ್.ಟಿ ಎಕ್ಟ :-

ದಿನಾಂಕ 05/02/2012 ರಂದು 1100 ಗಂಟೆಗೆ ಬೇನಚಿಂಚೊಳಿ ಗ್ರಾಮದ ಅಂಬೇಡ್ಕರ ಚೌಕ ಸಮೀಪ ಆರೋಪಿತರಾದ ಬಸವರಾಜ, ಸಂಗಮೇಶ ರವರುಗಳು ಹಿಂದಿನ ವೈರತ್ವದಿಂದ ಫಿರ್ಯಾದಿ ಆನಂದ ತಂದೆ ಮಡೆಪ್ಪಾ ದಿಗಡೆ ವಯ: 22 ವರ್ಷ ಜಾತಿ: ಎಸ್.ಸಿ ಉ: ಕೂಲಿ ಕೆಲಸ ಸಾ: ಬೇನಚಿಂಚೊಳಿ ರವರನ್ನು ಕರೆದು ನಮ್ಮ ಮಗನಿಗೆ ಯಾಕೆ ಜಗಳ ಮಾಡಿದ್ದಿ ಹೊಲಿಯ ಸುಳಿಮಗನೆ ಭೊಸಡಿಕೆ ಅಂತಾ ಜಾತಿ ನಿಂದನೆ ಮಾಡಿ ಕೈಯಿಂದ ಮುಖದ ಮೇಲೆ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಅ.ಸಂ 22/2012 ಕಲಂ 323.504 ಐಪಿಸಿ ಮತ್ತು 3 (1) (10) ಎಸ್.ಸಿ ಎಸ್.ಟಿ ಎಕ್ಟ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.