February 7, 2012

BIDAR DISTRICT DAILY CRIME UPDATE 07-02-2012

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 07-02-2012


ಬೀದರ ಮಾರ್ಕೇಟ್ ಪೊಲೀಸ್ ಠಾಣೆ ಗುನ್ನೆ ನಂ. 23/12 ಕಲಂ 23/2012 ಕಲಂ: 279, 304(ಎ) ಜೊತೆ ಐ.ಪಿ.ಸಿ. ಜೊತೆ 187 ಐ.ಎಮ್.ವಿ. ಕಾಯ್ದೆ :-

ದಿನಾಂಕ 05, 06.02.2012 ರಂದು ದೇವ ದೇವ ವನದ ಹತ್ತಿರ ಯಾವುದೋ ಅಪರಿಚಿತ ವಾಹನ ಚಾಲಕ ತನ್ನ ವಾಹನವನ್ನು ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ, ರಸ್ತೆಯ ಬದಿಯಲ್ಲಿ ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ಡಿಕ್ಕಿ ಮಾಡಿ ವಾಹನ ಸಮೇತ ಓಡಿ ಹೋಗಿರುತ್ತಾನೆ. ಡಿಕ್ಕಿಯ ಪರಿಣಾಮ ಅಪರಿಚಿತ ವ್ಯಕ್ತಿಯು ತೀವ್ರ ಗಾಯಹೊಂದಿ ಘಟನಾ ಸ್ಥಳದಲ್ಲಿಯೇ ಮೃತಪಟಿರುತ್ತಾನೆ. ಎಂದು ಫಿರ್ಯಾಾದಿ ಪ್ರಕಾಶ ತಂದೆ ವಿಶ್ವನಾಥ ಹೋಕ್ರಾಣೆ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬ.ಕಲ್ಯಾಣ ನಗರ ಪೊಲೀಸ್ ಠಾಣೆ ಗುನ್ನೆ ನಂ. 18/2012 ಕಲಂ 87 ಕೆ.ಪಿ. ಕಾಯ್ದೆ :-

ದಿನಾಂಕ 06/02/2012 ರಂದು 09.30 ಗಂಟೆಗೆ ಆರೋಪಿತರಾದ ಮಹೆಬೂಬಸಾಬ್ ತಂದೆ ಇಮಾಮಸಾಬ್ ನಾಗುರೆ ವಯ 60 ವರ್ಷ ಉ; ವ್ಯಾಪಾರ ಸಾ; ಗಾಜಿಪುರಾ ಗಲ್ಲಿ ಬಸವಕಲ್ಯಾಣ ಹಾಗು ಇನ್ನು 6, ಜನರು ಬಸವಕಲ್ಯಾಣ ನಗರದ ಬಸವೇಶ್ವರ ಮಂದಿರ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳಿಂದ ಅಂದರ ಬಹಾರ ಎಂಬ ನಸೀಬಿನ ಜೂಜಾಟ ಆಡುತ್ತಿರುವಾಗ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತರಿಂದ ನಗದು 3000/- ರೂಪಾಯಿ ಹಾಗು 52, ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮಂಠಾಳ ಪೊಲೀಸ್ ಠಾಣೆ ಗುನ್ನೆ ನಂ. 18/2012 ಕಲಂ 78(3) ಕೆ.ಪಿ. ಕಾಯ್ದೆ :-

ದಿನಾಂಕ : 06-02-2012 ರಂದು 1430 ಗಂಟೆಗೆ ಮಂಠಾಳ ಗ್ರಾಮದ ಸೋಮನಾಥ ಕತ್ತೆ ರವರ ಸೈಕಲ್ ಅಂಗಡಿಯ ಮುಂದೆವಿರುವ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಓಂಕಾರ ತಂದೆ ಶಿವರಾಯ ಪ್ರಜಾರಿ ವಯ|| 40 ವರ್ಷ ಮತ್ತು ಸಂಗ್ರಾಮ ತಂದೆ ಶರಣಪ್ಪಾ ವಾಗಶೆಟ್ಟಿ ವಯ|| 26 ವರ್ಷ ಇಬ್ಬರೂ ಸಾ|| ಮಂಠಾಳ ರವರುಗಳು ಸಾರ್ವಜನಿಕರಿಂದ ಹಣ ಪಡೆದು ನಸೀಬಿನ ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದರಿಂದ ಅವರ ಮೇಲೆ ದಾಳಿಮಾಡಿ ಅವರ ವಶದಿಂದ ನಗದು ಹಣ 1120/-, 3 ಮಟಕಾ ಚೀಟಿ ಮತ್ತು ಒಂದು ಬಾಲ ಪೇನನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ನಗರ ಪೊಲಿಸ ಠಾಣೆ ಭಾಲ್ಕಿ ಗುನ್ನೆ ನಂ. 18/12 ಕಲಂ 457, 380 ಐಪಿಸಿ :-

ದಿನಾಂಕ: 31-01-2012 ರಂದು ರಾತ್ರಿ ವೇಳೆಯಲ್ಲಿ ಭಾಲ್ಕಿಯ ಪದವಿ ಪೂರ್ವ ಕಾಲೇಜ ಕೋಣೆಯ ಆಧಾರ ಕೇಂದ್ರದಲ್ಲಿದ್ದ ಎಸ್ಸಾರ ಕಂಪೆನಿಯ ಒಂದು ಲ್ಯಾಪ್ಟಾಪ್ ಅ.ಕಿ. 22000/- ರೂ/. ಉಳ್ಳದ್ದು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಫಿರ್ಯಾದಿ ಪ್ರೇಮಕುಮಾರ ತಂದೆ ಬಸವರಾಜ ಪ್ರಭಾ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 26/12 ಕಲಂ 279, 338 ಐ.ಪಿ.ಸಿ.ಜೋತೆ 187 ಐ.ಎಮ.ವಿ.ಎಕ್ಟ :-

ದಿನಾಂಕ 06/02/2012 ರಂದು 18:30 ಗಂಟೆಗೆ ಫಿರ್ಯಾದಿ ಶ್ರೀ ಶರಣಪ್ಪಾ ತಂದೆ ಕಾಳಪ್ಪಾ ಕುಡತೇನೋರ 45 ವರ್ಷ ಸಾ/ಕ್ರಿಶ್ಚಿಯನ ಕಾಲೂನಿ ನೌಬಾದ ಬೀದರ ರವರು ತನ್ನ ಖಾಸಗಿ ಕೇಲಸ ಮುಗಿಸಿ ಕೊಂಡು ಮರಳಿ ತನ್ನ ಮನೆಗೆ ಹೋಗುವ ಸಲುವಾಗಿ ಜಮೀನಿ ಕ್ರಾಸ ಹತ್ತಿರ ಇರುವ ಸಂತೋಷ ಧಾಬಾ ಹತ್ತಿರ ಆಟೋರಿಕ್ಷಾ ಸಲುವಾಗಿ ಕಾಯುತ್ತಿರುವಾಗ ಬೀದರ ಕಡೆಯಿಂದ ಒಬ್ಬ ಕ್ವಾಲಿಸ ನಂ ಎಮ,ಹೆಚ,04ಬಿ,ಎಸ,5591 ನೇದ್ದರ ಚಾಲಕನು ತನ್ನ ವಾಹನವನ್ನು ವೇಗವಾಗಿ ಹಾಗೂ ಅಜಾಗೂರುಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಡಿಕ್ಕಿ ಪಡಿಸಿದರಿಂದ ಫಿರ್ಯಾದಿ ಕೇಳಗೆ ಬಿದ್ದ ಪ್ರಯುಕ್ತ ಅಪಘಾತದಿಂದ ಫಿರ್ಯಾದಿ ನಡುತೆಲೆಯಲ್ಲಿ ಪೆಟ್ಟಾಗಿ ಭಾರಿ ರಕ್ತಗಾಯ ಮತ್ತು ಬಲ ಹೆಬ್ಬರುಳು, ಭುಜಕ್ಕೆ,ಬಲ ಮೊಳಕಾಲಿಗೆ, ತೊಡೆಗೆ ತರಚಿದ ಗಾಯಗಳು ಹಾಗೂ ಎಡ ಮೊಳಕಾಲಿಗೆ ತರಚಿದ ಗಾಯ ಮತ್ತು ಎದೆಯಲ್ಲಿ ಗುಪ್ತ ಗಾಯ ಪಡಿಸಿ ಸದರಿ ಜೀಪ ಚಾಲಕನು ಅಪಘಾತ ಪಡಿಸಿದ ನಂತರ ಮುಂದೆ ಹೋಗಿ ಜೀಪ ಪಲ್ಟಿಮಾಡಿ ಓಡಿ ಹೋಗಿರುತ್ತಾನೆ ಅಂತ ಫಿರ್ಯಾದಿ ಹೇಳಿಕೆಯನ್ನು,ಬೀದರ ಜಿಲ್ಲಾ ಆಸ್ಪತ್ರೆಯಲ್ಲಿ ಪಡೆದು ಕೊಂಡು ಬೀದರ ಸಂಚಾರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೋಳ್ಳಲಾಗಿದೆ.

ಮಾರ್ಕೇಟ್ ಪೊಲೀಸ ಠಾಣೆ ಗುನ್ನೆ ನಂ. 24/12 ಕಲಂ 323, 324, 427, 307, 504, 506 ಐಪಿಸಿ :-

ದಿನಾಂಕ 06-02-2012 ರಂದು 1600 ಗಂಟೆಗೆ ಫಿರ್ಯಾದಿದಾರಾದ ಶ್ರೀ ಮಹ್ಮದ ಬಸೀರಖಾನ ತಂದೆ ಮಹ್ಮದ ನಜಿರಖಾನ ವಯ 50 ವರ್ಷ ಸಾ; ಮನೆ.ನಂ.8-2-39/3 ಅಫಜಲಪೊರಾ ಹೊರ ಶಾಹಗಂಜ ಬೀದರ. ಇವರು ಠಾಣೆಗೆ ಹಾಜರಾಗಿ ಬಾಯಿ ಮಾತಿನ ಹೇಳಿಕೆ ಫಿರ್ಯಾದು ಕೊಟ್ಟಿದು ಸಾರಾಂಶವೆನಂದರೆ, ದಿನಾಂಕ 06-02-2012 ರಂದು ಮಧ್ಯಾನ 1530 ಗಂಟೆಯ ಸಮಯಕ್ಕೆ ತನ್ನ ಮಗ ಮಹ್ಮದ ಆಶ್ರಫ ಖಾನ ಮತ್ತು ಹೊಟಲದಲ್ಲಿ ಕೆಲಸ ಮಾಡುವ ಮಹ್ಮದ ಅಶಿಫ, ಮಲ್ಲಪ್ಪಾ, ಮುಲ್ತಾನಿ ರವರೆಲ್ಲರೂ ಇದ್ದಾಗ ಮುಲ್ತಾನಿ ಕಾಲೋನಿಯ ಮಹ್ಮದ ಸುಲೇಮಾನ @ ಸಲ್ಮಾನ ತಂದೆ ಮಹ್ಮದ ಹುಸೇನ ಇತನು ಹೋಟಲ್ಗೆ ಬಂದು ಅವಾಚ್ಯವಾಗಿ ಬೈದು ಒಂದು ಕಬ್ಬಿಣದ ರಾಡದಿಂದ ಫಿಯರ್ಾದಿ ತಲೆಯ ಮೇಲೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದಾಗ ಫೀಯರ್ಾದಿಯು ತಪ್ಪಿಸಿಕೊಂಡಿದಕ್ಕೆ ಟೆಬಲ್ ಮೇಲೆ ಇದ್ದ ಗ್ಲಾಸಗಳು ಒಡೆದು ಹೋಗಿರುತ್ತವೆ. ಅಲ್ಲೆ ಇದ್ದ ಫಿಯರ್ಾದಿ ಮಗ ಕೇಳಲು ಬಂದಾಗ ಅವನ ಬಲಗೈ ಮುಂಗೈ ಮೇಲೆ ಹೊಡೆದು ಗುಪ್ತಗಾಯಪಡಿಸಿಅದ್ದು, ನಂತರ ಕೈಯಿಂದ ಫಿರ್ಯಾದಿಯ ತುಟಿಯ ಮೇಲೆ ಗಲ್ಲದ ಮೇಲೆ ಹಾಗೂ ಎಡಗೈ ಮಧ್ಯದ ಬೆರಳಿಗೆ ಹೊಡೆದು ರಕ್ತ ಮತ್ತು ಗುಪ್ತಗಾಯಪಡಿಸಿ ಫಿರ್ಯಾದಿ ಹೊಟಲದಲ್ಲಿಯ ಗ್ಲಾಸಗಳು ಒಡೆದು ಅಂದಾಜು 2000=00 ರೂ ಹಾನಿ ಮಾಡಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಗುನ್ನೆ ನಂ. 8/12 ಕಲಂ 279, 337, 338 ಐಪಿಸಿ :-

ದಿನಾಂಕ 05/02/2012 ರಂದು ಮುಂಜಾನೆ 0800 ಗಂಟೆಗೆ ಫಿರ್ಯಾಧಿ ಕೆ. ರಾಮಕುಮಾರ ರವರು ರಾಜಮಂಡ್ರಿಯಲ್ಲಿ ಪೇಪರ ಲೋಡಮಾಡಿಕೊಂಡು ಪೂನಾಕ್ಕ ಹೋಗುತ್ತಿರುವಾಗ ಮನ್ನಾಎಖೇಳ್ಳಿ ದಾಟಿದ ನಂತರ ದಿನಾಂಕ 06/02/2011 ರಂದು ರಾರಿ 0030 ಗಂಟೆಗೆ ರಾ. ಹೆ ನಂ 9 ರ ಮೇಲೆ ನಿಣರ್ಾ ಕ್ರಾಸ್ ಹತ್ತಿರ ಹೋಗುತಿದ್ದಾದ ಎದುರಿನಿಂದ ಅಂದರೆ ಹುಮನಾಬದ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಅತಿ ವೇಗ ಹಾಗೂ ನಿಷ್ಕಾಳಜೀತನದಿಂದ ಅಪಘಾತ ಮಾಡುವ ರೀತಿಯಲ್ಲಿ ಲಾರಿಯನ್ನು ಅಂಕು ಡೋಂಕಾಗಿ ಚಲಾಯಿಸಿಕೊಂಡು ಬಂದು ಲಾರಿಗೆ ಡಿಕ್ಕಿ ಮಾಡಿದ್ದರಿಂದ ಲಾರಿ ಚಾಲಕನಿಗೆ ಭಾರಿ ರಕ್ತಗಾಯವಾಗಿರುತ್ತದೆ. ಹಾಗೂ ಬಲಗಾಲ ಮೋಳಕಾಲ ಹತ್ತಿರ ಎಲಬು ಮುರಿದು ಭಾರಿ ಗುಪ್ತಗಾಯವಾಗಿರುತ್ತದೆ, ಹಾಗೂ ಅದರಲ್ಲಿದ ಕೀನರ ಮಹೆಬೂಬ ಇವನಿಗೆ ಸಾದಾ ತರಚಿದ ರಕ್ತಗಾಯಗಳಾಗಿರುತ್ತವೆ ಅಂತ ಕೊಟ್ಟ ಹೇಳಿಕೆಯ ಫೀರ್ಯದಿನ ಸಾರಾಂಶದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.