February 13, 2012

BIDAR DISTRICT DAILY CRIME UPDATE 13-02-2012

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 13-02-2012


ಹುಮನಾಬಾದ ಪೊಲೀಸ್ ಠಾಣೆ ಯು.ಡಿ.ಆರ್ ನಂ 02/2012 ಕಲಂ 174 ಸಿ.ಆರ್.ಪಿ.ಸಿ :-

ಫಿರ್ಯಾದಿತಳಾದ ಮಹೆಮೂನಬಾನು ಗಂಡ ರಹೀಮಖಾನ ವಯ: 65 ವರ್ಷ, ಸಾ: ನೂರಖಾನ್ ಅಖಾಡಾ ಹುಮನಾಬಾದ ಇವರ ಮಗಳಾದ ಮೃತ ಗೌಸೀಯಾ ಬಾನು ಗಂಡ ಆಸೀಫ್ ಖಾನ್ ಪಠಾಣ ವಯ: 28 ವರ್ಷ, ಜಾತಿ: ಮುಸ್ಲೀಮ್, ಸಾ: ನೂರಖಾನ್ ಅಖಾಡಾ ಹುಮನಾಬಾದ ಇವಳಿಗೆ ನಾಲ್ಕು ವರ್ಷಗಳ ಹಿಂದೆ ಫಿರ್ಯಾದಿಯವರ ತಮ್ಮ ದಾವುದಖಾನ್ ಇತನ ಮಗನಾದ ಆಸೀಫ್ಖಾನ್ ಪಠಾಣ ಇವರಿಗೆ ಕೊಟ್ಟು ಲಗ್ನ ಮಾಡಿ ತಮ್ಮ ಮನೆಯಲ್ಲಿಯೇ ಮನೆ ಅಳಿಯ ಅಂತ ಇಟ್ಟುಕೊಂಡಿರುತ್ತಾರೆ, ದಿನಾಂಕ 29/01/2012 ರಂದು ಬೆಳ್ಳಿಗ್ಗೆ 1100 ಗಂಟೆಗೆ ಗೌಸಿಯಾಬಾನು ಬಾನು ಇಕೆಯು ಚಹಾ ಮಾಡುತ್ತೇನೆಂದು ಹೇಳಿ ಸ್ಟೋ ಹೊತ್ತಿಸುವಾಗ ಆಕಸ್ಮಿಕವಾಗಿ ಬೆಂಕಿ ಗೌಸಿಯಾ ಇವಳ ಪಾಲಿಸ್ಟರ ಸೀರೆಗೆ ಬೆಂಕಿ ಹತ್ತಿಕೊಂಡಿರುತ್ತದೆ, ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಗುಲಬರ್ಗಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿರುತ್ತಾರೆ, ಅಲ್ಲಿ ಫಿರ್ಯಾದಿಯವರ ಮಗಳು ಗೌಸಿಯಾ ಬಾನು ಇಕೆಯು ಚಿಕಿತ್ಸೆ ಪಡೆಯುವಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 12/02/2012 ರಂದು ಮುಂಜಾನೆ 1100 ಗಂಟೆಗೆ ಮೃತ ಪಟ್ಟಿರುತ್ತಾಳೆಂದು ಫಿರ್ಯಾದಿಯವರು ಲಿಖಿತವಾಗಿ ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ 16/2012 ಕಲಂ 279, 337 ಐಪಿಸಿ ಜೊತೆ 187 ಐಎಂವಿ ಆಕ್ಟ್ :-

ದಿನಾಂಕ 12-02-2012 ರಂದು ಫಿರ್ಯಾದಿತಳಾದ ಗಾಯಾಳು ಸುಮನಬಾಯಿ ಗಂಡ ರಾಹುಲ ವಾಗಮಾರೆ ಸಾ: ಧನ್ನೂರಾ (ಎಂ.ಎಸ್) ಇವರು ತನ್ನ ಗಂಡನಾದ ರಾಹುಲ ಇಬ್ಬರು ಎಂಜಿಎಸ್ಎಸ್ಕೆ ಫ್ಯಾಕ್ಟರಿಯಿಂದ ತಮ್ಮ ಎತ್ತಿನ ಬಂಡಿಯಲ್ಲಿ ಕುಳಿತು ಬಳತ ಗ್ರಾಮಕ್ಕೆ ಕಬ್ಬು ಕಟಾವು ಮಾಡಿ ಕಬ್ಬು ಎತ್ತಿನ ಬಂಡಿಯಲ್ಲಿ ತುಂಬಿಕೊಂಡು ಬರಬೇಕೆಂದು ಹೋಗುವಾಗ ಉದಗೀರ ಬೀದರ ರೋಡಿನ ಮೇಲೆ ಅಳಂದಿ ಗ್ರಾಮದ ಹತ್ತಿರ ಇರುವ ಬಸ್ಸ ನಿಲ್ದಾಣದ ಮುಂದಿನ ರೋಡಿನ ಮೇಲಿಂದ ಹೋಗುವಾಗ ಹಿಂದಿನಿಂದ ಆರೋಪಿ ಲಾರಿ ನಂ ಎಂಎಚ್-24/ಎ-2216 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಸಿಕೊಂಡು ಬಂದು ಫಿರ್ಯಾದಿಯವರ ಎತ್ತಿನ ಬಂಡಿಯ ಹಿಂದೆ ಬಂದು ಡಿಕ್ಕಿ ಮಾಡಿ ತನ್ನ ಲಾರಿ ನಿಲ್ಲಿಸದೆ ಓಡಿಸಿಕೊಂಡು ಹೋಗಿದ ಪ್ರಯುಕ್ತ ಎತ್ತಿನ ಬಂಡಿಯ ಹಿಂದೆ ಕುಳಿತ ಫಿರ್ಯಾದಿಯವರು ಒಮ್ಮೇಲೆ ಕೇಳಗೆ ಬಿದ್ದಿರುವುದರಿಂದ ಎಡ ಸೊಂಟಕ್ಕೆ ಗುಪ್ತಗಾಯ, ಎಡಗಾಲು ಮುಂಗಾಲು ಹತ್ತಿರ ಗುಪ್ತಗಾಯ, ಎಡಗಡೆ ಫಕಳಿಗೆ ಗುಪ್ತಗಾಯವಾಗಿರುತ್ತದೆ, ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ 21/2012 ಕಲಂ 279, 337, 338 ಐಪಿಸಿ ಜೊತೆ 187 ಐಎಂವಿ ಆಕ್ಟ್ :-

ದಿನಾಂಕ 12/01/2012 ರಂದು ಫಿರ್ಯಾದಿ ರೂಪೇಶ ತಂದೆ ಸೂರೇಶ ಅಂಬುರೆ ವಯ: 28 ವರ್ಷ, ಜಾತಿ: ಕ್ಷತ್ರಿಯ, ಸಾ: ಶಿವನಗರ ಹುಮನಾಬಾದ ಇತನು ತನ್ನ ಗೆಳೆಯರಾದ 1) ನಾಗರಾಜ ತಂದೆ ಬಸವರಾಜ ಹೇಗಣ್ಣೆ ವಯ: 27 ವರ್ಷ, ಜಾತಿ: ಲಿಂಗಾಯತ, ಸಾ: ಬೇಬಿಗಲ್ಲಿ ಹುಮನಾಬಾದ, 2) ಸೋಮಶೇಖರ ತಂದೆ ವೀರಣ್ಣಾ ಬೇಳಗೆ ವಯ: 27 ವರ್ಷ, ಜಾತಿ: ಲಿಂಗಾಯತ, ಸಾ: ಬೇಬಿಗಲ್ಲಿ ಹುಮನಾಬಾದ ಹಾಗೂ 3) ಚನ್ನಪ್ಪಾ ತಂದೆ ಸೂರೆಶ ಹೇಗಡಿ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ಹುಮನಾಬಾದ ಇವರೆಲ್ಲರೂ ಕೂಡಿ ಇಂಡಿಕಾ ಕಾರ ನಂ ಎಂ.ಎಚ-04/ಬಿವೈ-1637 ನೆದ್ದರಲ್ಲಿ ಕುಳೀತು ಹುಮನಾಬಾದದಿಂದ ಬಸವಕಲ್ಯಾಣಕ್ಕೆ ಗೇಳೆಯನ ಮದುವೆಗೆ ಬಂದು ಬಸವಕಲ್ಯಾಣದಿಂದ ಹುಮನಾಬಾದಕ್ಕೆ ಬಸವಕಲ್ಯಾಣ-ಬಂಗ್ಲಾ ರಸ್ತೆಯ ಮುಖಾಂತರ ಹೋಗುತ್ತಿರುವಾಗ ಸದರಿ ಕಾರಿನ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಸಿಕೊಂಡು ಬಂದು ಮಿನಿವಿಧಾನ ಸೌದಧ ಹತ್ತಿರ ತನ್ನ ವಾಹನವನ್ನು ನಿಯಂತ್ರಣ ಮಾಡದೆ ರೋಡಿನ ಮೇಲೆ ಪಲ್ಟಿಮಾಡಿರುತ್ತಾನೆ, ಸದರಿ ಪಲ್ಟಿಯಿಂದ ಫಿರ್ಯಾದಿಗೆ ಎಡಗೈ ಮುಂಗೈ, ಬಲಗೈ ಹಾಗೂ ಬಲಭೂಜದ ಹತ್ತಿರ ರಕ್ತಗಾಯವಾಗಿರುತ್ತದೆ, ನಾಗರಾಜ ಇತನಿಗೆ ಬಲಗಡೆ ಭುಜಕ್ಕೆ ಭಾರಿಗುಪ್ತಗಾಯವಾಗಿರುತ್ತದೆ, ಸೋಮಶೇಖರ ಇತನ ಬೆನ್ನಿಗೆ ಗುಪ್ತಗಾಯವಾಗಿರುತ್ತದೆ, ಚನ್ನಪ್ಪಾ ಇತನ ಬಲಗೈ ಮುಂಗೈ ಹತ್ತಿರ, ಬಲಗಡೆ ಹಣೆಯಲ್ಲಿ ತರಚಿದ ಗಾಯವಾಗಿರುತ್ತದೆ, ಆರೋಪಿಯು ತನ್ನ ವಾಹನವನ್ನು ಪಲ್ಟಿಮಾಡಿ ಅಲ್ಲಿಂದ ಓಡಿಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿ ಹೇಳಿಕೆ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಬೀದರ ಮಾರ್ಕೇಟ್ ಪೊಲೀಸ ಠಾಣೆ ಗುನ್ನೆ ನಂ 28/2012 ಕಲಂ 324, 504 ಐಪಿಸಿ :-

ದಿನಾಂಕ 12-02-2012 ರಂದು ಫಿರ್ಯಾದಿ ಅಜೀಜ ರಹೆಮಾನ ತಂದೆ ಅತಾಉರ ರಹೆಮಾನ ವಯ: 30 ವರ್ಷ, ಸಾ: ನರಿಗರ ಮೊಹಲ್ಲಾ ಹೊರ ಶಹಾಗಂಜ ಬೀದರ ಇತನು ಮತ್ತು ಮಹ್ಮದ ಅಸ್ಲಂ ಇಬ್ಬರು ನರಿಗರ ಮೊಹಲ್ಲಾ ಮನೆಯ ಹತ್ತಿರ ಮಾತನಾಡುತ್ತಾ ನಿಂತಾಗ ಆರೋಪಿ ಆಶೀಫ ತಂದೆ ಮಹ್ಮದ ಇಸ್ಮಾಯಿಲ ಸಾ: ನರಿಗರ ಮೊಹಲ್ಲಾ ಹೊರ ಶಹಾಗಂಜ ಬೀದರ ಈತನು ಬಂದು ಫಿರ್ಯಾದಿಗೆ ಮೇರಾ ಭೈ ಕೇ ಸಾಥ ಕ್ಯಾ ಬಾತ ಕರ ರಹಿ ಹೈ ಅಂತಾ ಅವಾಚ್ಯವಾಗಿ ಬೈದಾಗ ಬಾತ ನಹಿ ಕರನಾ ಕ್ಯಾ ಅಂತಾ ಫಿರ್ಯಾದಿ ಅಂದಿದಕ್ಕೆ ಆರೋಪಿಯು ಹಿಡಿಗಲ್ಲನು ತೆಗೆದುಕೊಂಡು ತಲೆಯ ಮೇಲೆ ಹೊಡೆದು ರಕ್ತಗಾಯ ನಂತರ ಅದೇ ಕಲ್ಲಿನಿಂದ ತಲೆಯ ಹಿಂಭಾಗದಲ್ಲಿ ಹೊಡೆದು ರಕ್ತಗಾಯ ಪಡಿಸಿರುತ್ತಾನೆಂದು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಮಂಠಾಳ ಪೊಲೀಸ್ ಠಾಣೆ ಯು.ಡಿ.ಆರ್ ನಂ 04/2012 ಕಲಂ 174 ಸಿ.ಆರ.ಪಿ.ಸಿ :-

ದಿನಾಂಕ 12/02/2012 ರಂದು ಮೃತನಾದ ಸಂಜು ತಂದೆ ಭಾವರಾವ ಎವತೆ ವಯ: 45 ವರ್ಷ, ಸಾ: ರಾಮತೀರ್ಥ (ಡಿ) ಇತನು ಮನೆಯಿಂದ ಮುಂಜಾನೆ 0500 ಗಂಟೆಗೆ ಎದ್ದು ಸಂಡಾಸಕ್ಕೆಂದು ಹೋಗಿ ಹಾಗೆ ಹೊಲಕ್ಕೆ ದನಗಳಿಗೆ ಮೇವು ತರುತ್ತೇನೆಂದು ಹೇಳಿ ಸಂಜು ಇತನು ಹನಮಂತ ರವರ ಹೊಲದ ಬಂದಾರಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ, ಮೃತನು ಸುಮಾರು ವರ್ಷಗಳಿಂದ ಅರೆ ಹುಚ್ಚನಂತೆ ವರ್ತಿಸುತ್ತಿದ್ದನು ಇದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಹಗ್ಗದಿಂದ ಬೆವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆಂದು ಫಿರ್ಯಾದಿ ಮೀನಾಕ್ಷಿ ಗಂಡ ಸಂಜು ಎವತೆ ಸಾ: ರಾಮತೀರ್ಥ (ಡಿ) ರವರು ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಕಮಲನಗರ ಪೊಲೀಸ ಠಾಣೆ ಗುನ್ನೆ ನಂ 20/2012 ಕಲಂ 324, 504 ಐಪಿಸಿ ಮತ್ತು 3(1) (10) ಎಸ್.ಸಿ/ಎಸ್.ಟಿ ಆಕ್ಟ್ 1989 :-

ದಿನಾಂಕ 12-02-2012 ರಂದು ಫಿರ್ಯಾದಿ ಭೀಮ ತಂದೆ ಸಟವಾಜಿ ಕಾಂಬಳೆ ವಯ: 35 ವರ್ಷ, ಜಾತಿ: ಎಸ್ಸಿ ಹೊಲಿಯಾ, ಸಾ: ಕೊಟಗ್ಯಾಳ ಇತನು ತನ್ನ ಗ್ರಾಮದಲ್ಲಿ ಚಿಕನ್ ಅಂಗಡಿಗೆ ಹೋಗುತ್ತಿದ್ದಾಗ, ಆರೋಪಿ ಹಸನ ಶೆಕ್ ಜಾತಿ: ಮುಸ್ಲಿಂ, ಸಾ: ಕೊಟಗ್ಯಾಳ, ಇತನು ಫಿರ್ಯಾದಿಗೆ ಮದ್ರಾಸ್ಗೆ ಹೋಗುವ ಸಂಬಂಧ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಚಿಕನ್ ಅಂಗಡಿಯಲ್ಲಿನ ಚಾಕು ತೆಗೆದುಕೊಂಡು ಫಿರ್ಯಾದಿಯ ತಲೆಯಲ್ಲಿ ಹೊಡೆದು ರಕ್ತಗಾಯಪಡಿಸಿರುತ್ತಾನೆಂದು ಕೊಟ್ಟ ಫಿರ್ಯಾದಿಯ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಧನ್ನೂರ ಪೊಲೀಸ್ ಠಾಣೆ ಗುನ್ನೆ ನಂ 19/2012 ಕಲಂ 279, 338 ಐಪಿಸಿ ಜೊತೆ 187 ಐಎಂವಿ ಆ್ಯಕ್ಟ್ :-

ದಿನಾಂಕ 12/02/2012 ರಂದು ಫಿರ್ಯಾದಿ ಭಗವಂತ ತಂದೆ ಬಸವಣಪ್ಪಾ ಪಾಟೀಲ್, ವಯ: 41 ವರ್ಷ, ಜಾತಿ: ಲಿಂಗಾಯತ, ಸಾ: ಕಣಜಿ ಇತನು ಶ್ರೀಮಂತ ತಂದೆ ನಾಗಶೇಟ್ಟಿ ಇವರ ಜೊತೆಯಲ್ಲಿ ಟ್ರಾಕ್ಟರ ನಂ. ಕೆ.ಎ-39/ಟಿ-3627 ನೇದ್ದರ ಮೇಲೆ ಕುಳಿತು ಕೊಂಡು ಮನೆ ಕಡೆಗೆ ಬರುತ್ತಿರುವಾಗ ಸದರಿ ಟ್ರಾಕ್ಟರ ಚಾಲಕನಾದ ಉಮೇಶ ತಂದೆ ಶಂಕರ ಸಾ: ಸಂಗೋಳಗಿ ಇವನು ಟ್ರಾಕ್ಟರ ಅತಿವೇಗ ಹಾಗು ನಿಷ್ಕಾಳಜಿಯಿಂದ ಚಲಾಯಿಸಿ ವೈಜೀನಾಥ ಅಜ್ಜಾರವರ ಹೋಲದ ಹತ್ತಿರ ಪಲ್ಟಿ ಮಾಡಿ ಓಡಿ ಹೋಗಿರುತ್ತಾನೆ, ಸದರಿ ಪಲ್ಟಿಯ ಪರಿಣಾಮ ಫಿರ್ಯಾದಿ ಹಾಗು ಶ್ರಿಮಂತನಿಗೆ ಭಾರಿ ಒಳಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಬೀದರ ಗಾಂಧಿ ಗಂಜ ಪೊಲೀಸ್ ಠಾಣೆ ಗುನ್ನೆ ನಂ 26/2012 ಕಲಂ 498(ಎ), 504, 506 ಜೊತೆ 34 ಐಪಿಸಿ :-

ಫಿರ್ಯಾದಿತಳಾದ ಸುಜಾತಾ ಗಂಡ ಗಣಪತಿ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ಹಿಲಾಲಪೂರ, ಸದ್ಯ: ಹಾರೂರಗೇರಿ ಬೀದರ ಇಕೆಯ ಮದುವೆಯು ದಿನಾಂಕ 17-05-2005 ರಂದು ಆರೋಪಿ ಗಣಪತಿ ತಂದೆ ವೀರಶೇಟ್ಟಿ ಸಾ: ಹೀಲಾಲಪೂರ ಜೊತೆಗೆ ಲಗ್ನವಾಗಿರುತ್ತದೆ, ಲಗ್ನವಾದ ನಂತರ ಆರೋಪಿಯು ಫಿರ್ಯಾದಿತಳಿಗೆ ಸೂರತದಲ್ಲಿ ಮೋರಾ ಟೆಕರಾ ಹಜಾರ ರೋಡ ಸೂರತ ಗ್ರಾಮದಲ್ಲಿ ಕರೆದುಕೊಂಡು ಹೋಗಿ ಉಳಿದು ಗೊತ್ತೆದಾರಿ ಕೆಲಸ ಮಾಡಿಕೊಂಡು ಇರುತ್ತಾನೆ, ಆರೋಪಿಯು ಫಿರ್ಯಾದಿತಳ ಜೊತೆಯಲ್ಲಿ ನೀನು ನಿನ್ನ ತಾಯಿ ತಂದೆಯವರ ಜೊತೆಗೆ ಏಕೆ ಮಾತನಾಡುತ್ತಿ ಅಂತ ಹೇಳಿ ವಿನಾಃ ಕಾರಣ ಜಗಳ ಮಾಡಿ ಹೊಡೆ ಬಡೆ ಮಾಡಿ ಕಿರುಕುಳ ಕೊಡುತ್ತಿರುವದರಿಂದ ಇಚ್ಛಾಪೂರ ಠಾಣೆ ಸೂರತದಲ್ಲಿ ಫಿರ್ಯಾದಿತಳು ತನ್ನ ಗಂಡನ ಕಿರುಕುಳ ಬಗ್ಗೆ ದೂರು ಸಲ್ಲಿಸಿರುವದರಿಂದ ಆರೋಪಿತನ ಮೇಲೆ ಕೇಸ ದಾಖಲಾಗಿದ್ದು ಇರುತ್ತದೆ. ಈ ಅವಧಿಯಲ್ಲಿ ಫಿರ್ಯಾದಿತಳಿಗೆ ನೀನು ನನ್ನ ಮೇಲೆ ಹಾಕಿದ ಕೇಸು ವಾಪಸ ತೆಗೆದುಕೋ ಇಲ್ಲದ್ದಿದರೇ ನಿನಗೆ ಹೊಡೆದು ಹಾಕುತ್ತೇನೆ ಅಂತ ಜಗಳ ಮಾಡಿ ಹೊಡೆ ಬಡೆ ಮಾಡುತ್ತಿರುವದರಿಂದ ಫಿರ್ಯಾದಿತಳು ತನ್ನ ತಾಯಿ ತಂದೆಯವರಿಗೆ ಸದರಿ ವಿಷಯ ತಿಳಿಸಿದಾಗ 2 ತಿಂಗಳ ಹಿಂದೆ ತಾಯಿ ತಂದೆಯವರು ತವರು ಮನೆಗೆ ಕರೆದುಕೊಂಡು ಬಂದಿರುತ್ತಾರೆ. ಹೀಗಿರುವಾಗ ಅತ್ತೆಯಾದ ಶರಣಮ್ಮಾ ಹಾಗೂ ಮಾವ ವೀರಶೇಟ್ಟಿ ಇವರು 4 ದಿವಸದ ಹಿಂದೆ ಹಿಲಾಲಪೂರ ಗ್ರಾಮದಿಂದ ಫಿಯರ್ಾದಿತಳ ತವರು ಮನೆಗೆ ಬಂದು ಫಿರ್ಯಾದಿತಳಿಗೆ ನೀನು ನಮ್ಮ ಮಗನ ಮೇಲೆ ಸೂರತದಲ್ಲಿ ಕೇಸ ಹಾಕಿ ತವರು ಮನೆಗೆ ಬಂದು ಉಳಿದಿರುತ್ತಿ, ಅಂತ ಅವಾಚ್ಯವಾಗಿ ಬೈದು, ಜಗಳ ಮಾಡಿರುತ್ತಾರೆ, ಮತ್ತು ದಿನಾಂಕ 12-02-2012 ರಂದು ರಾತ್ರಿ 900 ಗಂಟೆಗೆ ಮೊಬೈಲ ನಂಬರ 990150003 ನೇದರಿಂದ ಫಿರ್ಯಾದಿತಳ ತಾಯಿಯ ಮೋಬೈಲ್ ಸಂ. 9901109117 ನೇದಕ್ಕೆ ಫೋನ ಮಾಡಿ ನೀನು ಕೇಸ ಹಿಂದಕ್ಕೆ ತೆಗೆದುಕೊಳ್ಳಬೇಕು ಮತ್ತು ಸರಿಯಾಗಿ ಇರಬೇಕು ಇಲ್ಲದ್ದಿದರೇ ನಿನಗೆ ಹೊಡೆದು ಹಾಕುತ್ತೇನೆ ಅಂತ ಫೋನ್ ಮೇಲೆ ಜೀವದ ಬೆದರಿಕೆ ಹಾಕಿರುತ್ತಾರೆ, ನಂತರ ದಿನಾಂಕ: 13-02-2012 ಬೆಳಿಗ್ಗೆ 0830 ಗಂಟೆಗೆ ಫಿರ್ಯಾದಿಯವರ ಅತ್ತೆ-ಮಾವ ಮನೆಗೆ ಬಂದು ನಿನಗೆ ಮದುವೆ ಯಾರು ಮಾಡಿರುತ್ತಾರೆ ಅವರ ಜೊತೆಗೆ ಹೊಗು ಅಂತ ಮನಸಿಗೆ ನೋವು ಆಗುವಂತೆ ಹಿಯ್ಯಾಳಿಸಿ ಮಾತನಾಡಿ ಮಾನಸಿಕ ಕಿರುಕುಳ ಕೊಟ್ಟು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.