February 10, 2012

BIDAR DISTRICT DAILY CRIME UPDATE 10-02-2012

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 10-02-2012

ಧನ್ನೂರ ಪೊಲೀಸ್ ಠಾಣೆ ಗುನ್ನೆ ನಂ 18/2012 ಕಲಂ 457, 380 ಐಪಿಸಿ :-

ದಿನಾಂಕ 19, 20/01/2012 ರಂದು ರಾತ್ರಿ ವೇಳೆಯಲ್ಲಿ ಹಾಲಹಿಪ್ಪಗರಗಾ ಗ್ರಾಮ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಇರುವ ಆಧಾರ ಕೋಣೆಯ ಕೊಂಡಿ ಮುರಿದು ಅದರಲ್ಲಿದ 3 ಲ್ಯಾಪ ಟಾಪ ಎಸಾರ ಕಂಪನಿಯ, 1 ಸ್ಕಾನರ, 1 ಯುಪಿಎಸ್ ಟ್ರಾಯಬಲ್ ಕಂಪನಿ, 1 ಪ್ರಿಂಟರ ಕೇನಾನ ಕಂಪನಿ ಅ.ಕಿ. 24,000/- ರೂ ಬೆಲೆಬಾಳುವುದು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ಪ್ರೇಮಕುಮಾರ ತಂದೆ ಬಸವರಾಜ ಪ್ರಭಾ ಸಾ: ತೇಗಂಪೂರ ರವರು ಕನ್ನಡದಲ್ಲಿ ಟೈಪ್ ಮಾಡಿ ಸಲ್ಲಿಸಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿ ಗಂಜ ಪೊಲೀಸ್ ಠಾಣೆ ಬೀದರ ಗುನ್ನೆ ನಂ 23/2012 ಕಲಂ 323, 498(ಎ), 504, 506 ಐಪಿಸಿ :-

ಫಿರ್ಯಾದಿತಳಾದ ಲಕ್ಷ್ಮಿ ಗಂಡ ಶರಣಪ್ಪಾ ಕಾಂಬಳೆ ವಯ: 32 ವರ್ಷ, ಜಾತಿ: ದಲಿತ, ಸಾ: ಹನುಮಾನ ನಗರ ಬೀದರ ಇಕೆಯ ಮದುವೆಯು 19-05-2000 ರಂದು ಆರೋಪಿ ಶರಣಪ್ಪಾ ತಂದೆ ವಿಠಲರಾವ ವಯ: 39 ವರ್ಷ, ಜಾ: ದಲಿತ, ಉ: ಮಿಲಟರಿಯಲ್ಲಿ ನೌಕರಿ, ಸಾ: ನಾವದಗೇರಿ, ಸದ್ಯ: ಹನುಮಾನ ನಗರ ಬೀದರ ಇತನ ಜೊತೆಯಲ್ಲಿ ಆಗಿದ್ದು, ಆರೋಪಿಯು ಮನೆ ಅಳಿಯನೆಂದು ಮದುವೆ ಮಾಡಿಕೊಂಡಿರುತ್ತಾನೆ, ಆರೋಪಿಯು ಸುಮಾರು 5 ವರ್ಷದಿಂದ ಫಿರ್ಯಾದಿತಳಿಗೆ ಫೋನ ಮಾಡಿ ವಿನಾಃ ಕಾರಣ ನೀನು ಅವಾರ ಇದ್ದಿ, ನಿನು ಬೇರೆಯವರ ಜೊತೆಯಲ್ಲಿ ಇರುತ್ತಿ, ಓಡಾಡುತ್ತಿದ್ದಿ ಅಂತ ಇಲ್ಲಾ ಸಲ್ಲದ ಆರೋಪ ಹೊಲಿಸಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ ಮತ್ತು ನಿನ್ನ ತಾಯಿಯ ಹೆಸರಿನಲ್ಲಿದ್ದ ಮನೆಯ ಕಾಗದ ಪತ್ರಗಳು ನನಗೆ ಕೊಡು ಅಂತ ಹೊಡೆ ಬಡೆ ಮಾಡಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ, ಇಗ ಸುಮಾರು 11 ದಿವಸಗಳ ಹಿಂದೆ ಆರೋಪಿಯು ರಜೆಯ ಮೇಲೆ ಮನೆಗೆ ಬಂದಿದ್ದು, ಮನೆಗೆ ಬಂದಾಗಿನಿದ್ದ ಯಾವುದಾದರೂ ನೇಪ ತೆಗೆದು ಹೊಡೆ ಬಡೆ ಮಾಡಿ ಕಿರುಕುಳ ಕೊಡುವದು ಮಾಡುತ್ತಿದ್ದಾನೆ, ಹಿಗಿರುವಾಗ ದಿನಾಂಕ: 07-02-2012 ರಂದು ರಾತ್ರಿ 900 ಗಂಟೆಗೆ ಫಿಯರ್ಾದಿತಳಿಗೆ ಅವಾಚ್ಯ ಶಬ್ದಗಳಿಂದ ಬೈದು ಮನೆಯ ಕಾಗದ ಪತ್ರಗಳು ಕೊಡು ಇಲ್ಲದಿದ್ದರೆ ನಿನಗೆ ಹೊಡೆದು ಹಾಕುತ್ತೇನೆ ಅಂತ ಕಿರುಕುಳು ಕೊಡುತ್ತಿದ್ದರಿಂದ, ಫಿರ್ಯಾದಿತಳು ತನ್ನ ಸೋದರ ಮಾವನ ಭಾವನಾದ ಸುಭಾಷ ರವರ ಮನೆ ಬಂದು ಉಳಿದುಕೊಂಡಿರುತ್ತಾಳೆ, ದಿನಾಂಕ: 09-02-2012 ರಂದು ಮುಂಜಾನೆ. 0700 ಗಂಟೆಗೆ ಫಿರ್ಯಾದಿತಳು ಹನುಮಾನ ನಗರದಲ್ಲಿದ್ದ ತನ್ನ ಮನೆಗೆ ಹೋದಾಗ ಆರೋಪಿಯು ಮತ್ತೆ ನೀನು ಮನೆಗೆ ಏಕೆ ಬಂದಿದ್ದಿ ಮನೆಯ ಕಾಗದ ಪತ್ರಗಳು ಎಲ್ಲಿ ಇಟ್ಟಿದ್ದು ಕೊಡು ಇಲ್ಲಿಯವರೆಗೆ ಎಲ್ಲಿ ಉಳಿದಿದ್ದಿ ಅಲ್ಲಿಗೆ ಹೊಗು ಅವಾರ ಅಂತ ಬೈದು ಕಿರುಕುಳ ಕೊಟ್ಟು ಮನೆಯಿಂದ ಹೊರಗೆ ಹಾಕಿರುತ್ತಾನೆಂದು ಕೊಟ್ಟ ಫಿರ್ಯಾದಿಯ ಸಾರಾಂಶದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ನೂತನ ನಗರ ಪೊಲೀಸ್ ಠಾಣೆ ಬೀದರ ಗುನ್ನೆ ನಂ 30/2012 ಕಲಂ 87 ಕೆಪಿ ಆ್ಯಕ್ಟ :-

ದಿನಾಂಕ 09-02-2012 ರಂದು ಫಿರ್ಯಾದಿ ದಿಲಿಪ ಸಾಗರ ಪಿಎಸ್ಐ ಹುಲಸೂರ ಪೊಲೀಸ್ ಠಾಣೆ ರವರಿಗೆರ ಖಚಿತ ಮಾಹಿತಿ ಬಂದ ಮೇರೆಗೆ ಫಿರ್ಯಾದಿಯವರು ಪ್ರತಾಪನಗರ ಭವಾನಿ ಗುಡಿಯ ಹಿಂದುಗಡೆ ಶಂಕ್ರಯ್ಯಾ ಸ್ವಾಮಿ ಇವರ ಅಂಗಡಿಯ ಮುಂದೆ ಆರೋಪಿತರಾದ 1) ಸೈಯದ ನಸಿರೊದ್ದಿನ ತಂದೆ ಬಸಿರೊದ್ದಿನ, ವಯ: 43 ವರ್ಷ, 2) ಶಿವರಾಯ ತಂದೆ ಚನ್ನಪ್ಪಾ ಬಿರಾದಾರ, ವಯ: 60 ವರ್ಷ, 3) ವಿಶ್ವನಾಥ ತಂದೆ ಗುಂಡಪ್ಪಾ, ವಯ: 48 ವರ್ಷ, 4) ಕಂಟೆಪ್ಪಾ ತಂದೆ ಶಾಮರಾವ, ವಯ: 38 ವರ್ಷ,5) ಗುಂಡಪ್ಪಾ ತಂದೆ ಚನ್ನಬಸಪ್ಪಾ, ವಯ: 60 ವರ್ಷ, 6) ರಾಜಕುಮಾರ ತಂದೆ ಶಂಕ್ರೆಪ್ಪಾ, ವಯ: 45 ವರ್ಷ, ಸಾ: ಪ್ರತಾಪನಗರ ಬೀದರ, ಇವರೆಲ್ಲರೂ ಇಸ್ಪಿಟ ಎಲೆಗಳನ್ನು ಸಾರ್ವಜನಿಕ ಸ್ಥಳದಲ್ಲಿ ಆಡುತ್ತಿರುವಾಗ ಆರೋಪಿತರನ್ನು ಹಿಡಿದು ಅವರಿಂದ 710/- ನಗದು ಹಣ ಹಾಗೂ 52 ಇಸ್ಪಿಟ ಎಲೆಗಳನ್ನು ಹಾಗೂ ಆರೋಪಿತರಿಗೆ ದಸ್ತಗಿರಿ ಮಾಡಿಕೊಂಡು, ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೊಲೀಸ ಠಾಣೆ ಗುನ್ನೆ ನಂ 09/2012 ಕಲಂ 279, 337, 338 ಐಪಿಸಿ ಜೊತೆ 187 ಐಎಂವಿ ಆ್ಯಕ್ಟ್ :-

ದಿನಾಂಕ 06/02/2011 ರಂದು ಫಿರ್ಯಾದಿ ಭೀಮಶ್ಯಾ ತಂದೆ ಕೇಶಪ್ಪ ಕತ್ರಿ ವಯ: 55 ವರ್ಷ, ಜಾತಿ: ಗೋಲ್ಲ, ಸಾ: ಬಸಿಲಾಪೂರ ಇವರು ತನ್ನ ಮೋಟರ ಸೈಕಲ್ ನಂ ಕೆಎ-38/ಕೆ-997 ನೇದ್ದರ ಮೇಲೆ ಬಸಿಲಾಪೂರಕ್ಕೆ ಹೋಗುತ್ತಿರುವಾಗ ಮನ್ನಾಎಖೇಳ್ಳಿ - ಹೈದ್ರಾಬಾದ ರಾ.ಹೆ ನಂ - 9 ರ ರೋಡಿನ ಬೋರಾಳ ಕ್ರಾಸ್ ರೋಡಿನ ಮೇಲೆ ಆರೋಪಿ ಮೋಟರ ಸೈಕಲ್ ನಂ ಕೆಎ-38/ಎಲ್- 890 ನೇದ್ದರ ಚಾಲಕನಾದ ಸುಧಾಕರ ತಂದೆ ಝೆರೆಪ್ಪಾ ಸಾ: ರಾಜಗೀರಾ ಇತನು ಮೋಟರ ಸೈಕಲ್ನ್ನು ಅತಿ ವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿದರಿಂದ ಫಿರ್ಯಾದಿ ಬಲಗಾಲ ಹಿಮ್ಮಡಿಗೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಬಲಭುಜಕ್ಕೆ ಗುಪ್ತಗಾಯವಾಗಿರುತ್ತದೆ, ಡಿಕ್ಕಿ ಮಾಡಿದ ಮೋಟರ ಸೈಕಲ ಹಿಂದೆ ಕುಳಿತ ವ್ಯಕ್ತಿಗೆ ಹಣೆಗೆ ಎಡ್ ಹುಬ್ಬಿಬನ ಕೇಳಗೆ ತರಚಿದ ಗಾಯಗಳಾಗರುತ್ತವೆ, ಆರೋಪಿಯು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಗುನ್ನೆ ನಂ 37/2012 ಕಲಂ 147, 148, 324, 504, 307, 109 ಜೊತೆ 149 ಐಪಿಸಿ :-

ದಿನಾಂಕ 09/02/2012 ರಂದು ಇಂಚೂರ ಗ್ರಾಮ ಪಂಚಾಯತ ಕಛೇರಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅವ್ಯವಹಾರ ನಡೆಸಿ ಸುಳ್ಳು ದಾಖಲೆ ಸೃಷ್ಠಿಸಿ ಸರ್ಕಾರದ ಹಣ ವಂಚನೆ ಮಾಡಿದ ಬಗ್ಗೆ ಲೋಕ್ತಯುಕ್ತ ಕಛೇರಿಯಿಂದ ಅಧಿಕಾರಿಗಳು ಗ್ರಾಮ ಪಂಚಾಯತ ಕಛೇರಿಯಲ್ಲಿ ದಾಖಲೆಗಳು ಪರಿಶೀಲಿಸಿ ನೋಡುವಾಗ ಫಿಯರ್ಾದಿ ದೇವಿದಾಸ ತಂದೆ ದಾದಾರಾವ ಸಾಗಾಂವೆ ವಯ: 37 ವರ್ಷ, ಜಾತಿ: ಮರಾಠಾ, ಸಾ: ಇಂಚೂರ, ತಾ: ಭಾಲ್ಕಿ ಇತನಿಗೆ ಗ್ರಾಮ ಪಂಚಾಯತಗೆ ಬರಲು ತಿಳಿಸಿದ ಮೇರೆಗೆ ಫಿಯರ್ಾದಿ ತನ್ನ ತಮ್ಮನ ಜೊತೆಯಲ್ಲಿ ಗ್ರಾಮ ಪಂಚಾಯತದಲ್ಲಿ ಕುಳಿತಾಗ ಆರೋಪಿತರಾದ 1) ನರಸಿಂಗ ತಂದೆ ಪಿರಾಜಿ ಕಾರಬಾರಿ ವಯ: 36 ವರ್ಷ, ಜಾತಿ: ಮರಾಠಾ, 2) ಜಟ್ಟಿಂಗ ತಂದೆ ಪಿರಾಜಿ ಕಾರಬಾರಿ ವಯ: 25 ವರ್ಷ, ಜಾತಿ: ಮರಾಠಾ, 3) ನಾಗರಬಾಯಿ ಗಂಡ ಪಿರಾಜಿ ಕಾರಬಾರಿ ವಯ: 60 ವರ್ಷ, ಜಾತಿ: ಮರಾಠಾ, 4) ರಾಧಿಕಾ ತಂದೆ ನರಸಿಂಗ ಕಾರಬಾರಿ ವಯ: 15 ವರ್ಷ, ಜಾತಿ: ಮರಾಠಾ, 5) ಪೂಜಾ ತಂದೆ ನರಸಿಂಗ ಕಾರಬಾರಿ ವಯ: 13 ವರ್ಷ, ಜಾತಿ: ಮರಾಠಾ, 6) ಅವಿನಾಶ ತಂದೆ ದೌಲತರಾವ ಪಾಟೀಲ ವಯ: 37 ವರ್ಷ, ಜಾತಿ: ಮರಾಠಾ, 7) ವಿಕಾಸ ತಂದೆ ದೌಲತರಾವ ಪಾಟೀಲ ವಯ: 32 ವರ್ಷ, ಜಾತಿ: ಮರಾಠಾ ಎಲ್ಲರೂ ಸಾ: ಇಂಚೂರ ತಾ: ಭಾಲ್ಕಿ ಇವರೆಲ್ಲರೂ ತಮ್ಮ ತಮ್ಮ ಕೈಗಳಲ್ಲಿ ಕೊಡ್ಲೆ, ಕಮ್ಮಕತ್ತಿ, ಕಲ್ಲುಗಳು ಹಿಡಿದುಕೊಂಡು ಪಂಚಾಯತ ಕಛೇರಿಯಲ್ಲಿ ಬಂದು ಫಿಯರ್ಾದಿಗೆ ನರಸಿಂಗ ಇತನು ನೀನು ನನ್ನ ಹೆಂಡತಿ ಆಶಾ ಇವಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಿ ಅಂತ ಅವಾಚ್ಯ ಶಬ್ದಗಳಿಂದ ಬೈದು, ತನ್ನ ಕೈಯಲ್ಲಿದ್ದ ಕಮ್ಮಕತ್ತಿಯಿಂದ ಕೊಲೆ ಮಾಡುವ ಉದ್ದೇಶದಿಂದ ಬಲಗೈ ಬೆರಳುಗಳ ಮೇಲೆ ಮತ್ತು ಎಡಕೈ ಮುಂಗೈ ಮೇಲ್ಭಾಗಕ್ಕೆ ಹೊಡೆದು ಭಾರಿ ರಕ್ತಗಾಯ ಪಡಿಸಿರುತ್ತಾನೆ, ಜಟ್ಟಿಂಗ ಇತನು ಕೊಡ್ಲಿಯಿಂದ ಬಲಭುಜದ ಮೇಲೆ, ಬಲಫಕಾಳಿ ಮೇಲೆ ಮತ್ತು ಬಲಗಡೆ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು, ನಾಗರಬಾಯಿ ಇವಳು ಕಲ್ಲಿನಿಂದ ಬಲಗಾಲ ಮೊಳಕಾಲ ಮೇಲೆ ಹೊಡೆದಳು, ರಾಧಿಕಾ ಇವಳು ಕಲ್ಲಿನಿಂದ ಬೆನ್ನಿನಲ್ಲಿ ಹೊಡೆದಳು, ಪೂಜಾ ಇವಳು ಕಲ್ಲಿನಿಂದ ಬೆನ್ನಲ್ಲಿ ಹೊಡೆದಳು ಸದರಿ ಆರೋಪಿತರಿಗೆ ಅವಿನಾಶ ತಂದೆ ದೌಲತರಾವ ಪಾಟೀಲ ಮತ್ತು ಅವರ ತಮ್ಮ ವಿಕಾಶ ಪಾಟೀಲ ಇವರು ಫಿರ್ಯಾದಿಗೆ ಕೊಲೆ ಮಾಡಲು ಪ್ರಚೋದನೆ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಗುನ್ನೆ ನಂ 38/2012 ಕಲಂ 353, 504 ಜೊತೆ 34 ಐಪಿಸಿ :-

ದಿನಾಂಕ 09/02/2012 ರಂದು ಆರೋಪಿತರಾದ 1) ನರಸಿಂಗ ತಂದೆ ಪಿರಾಜಿ ಕಾರಬಾರಿ ವಯ: 36 ವರ್ಷ, ಜಾತಿ: ಮರಾಠಾ, 2) ಜಟ್ಟಿಂಗ ತಂದೆ ಪಿರಾಜಿ ಕಾರಬಾರಿ ವಯ: 25 ವರ್ಷ, ಜಾತಿ: ಮರಾಠಾ, 3) ನಾಗರಬಾಯಿ ಗಂಡ ಪಿರಾಜಿ ಕಾರಬಾರಿ ವಯ: 60 ವರ್ಷ ಜಾತಿ: ಮರಾಠಾ, 4) ರಾಧಿಕಾ ತಂದೆ ನರಸಿಂಗ ಕಾರಬಾರಿ ವಯ: 15 ವರ್ಷ, ಜಾತಿ: ಮರಾಠಾ, 5) ಪೂಜಾ ತಂದೆ ನರಸಿಂಗ ಕಾರಬಾರಿ ವಯ: 13 ವರ್ಷ, ಜಾತಿ: ಮರಾಠಾ ಎಲ್ಲರೂ ಸಾ: ಇಂಚೂರ ಇವರೆಲ್ಲರೂ ಇಂಚೂರ ಗ್ರಾಮ ಪಂಚಾಯತಯಲ್ಲಿ ಬಂದು ದೇವಿದಾಸ ತಂದೆ ದಾದಾರಾವ ಸಾಗಾಂವೆ ಇತನ ಜೊತೆಯಲ್ಲಿ ಜಗಳ ಮಾಡಿ ಸರ್ಕಾರದ ಕರ್ತವ್ಯದಲ್ಲಿ ಅಡೆ ತಡೆ ಉಂಟು ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಸರ್ಕಾರಿ ಕರ್ತವ್ಯ ನಿರ್ವಹಿಸದಂತೆ ಅಪರಾಧಿಕ ಬಲಪ್ರಯೋಗ ಮಾಡಿ ಅಡ್ಡಿಪಡಿಸಿರುತ್ತಾರೆಂದು ಫಿರ್ಯಾದಿ ರಾಮರತನ ಎಎಸ್ಐ ಹುಲಸೂರ ಪೊಲೀಸ ಠಾಣೆ ರವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಗುನ್ನೆ ನಂ 39/2012 ಕಲಂ 353, 504, 427 ಜೊತೆ 34 ಐಪಿಸ :-

ದಿನಾಂಕ 09/02/2012 ರಂದು ಆರೋಪಿತರಾದ 1) ನರಸಿಂಗ ತಂದೆ ಪಿರಾಜಿ ಕಾರಬಾರಿ ವಯ: 36 ವರ್ಷ, ಜಾತಿ: ಮರಾಠಾ, 2) ಜಟ್ಟಿಂಗ ತಂದೆ ಪಿರಾಜಿ ವಯ: 25 ವರ್ಷ, 3) ನಾಗರಬಾಯಿ, 4) ರಾಧಿಕಾ ತಂದೆ ನರಸಿಂಗ ವಯ: 15 ವರ್ಷ, 5) ಪೂಜಾ ತಂದೆ ನರಸಿಂಗ ವಯ: 13 ವರ್ಷ ಇವರೆಲ್ಲರೂ ಫಿರ್ಯಾದಿ ದೇವಿದಾಸ ತಂದೆ ದಾದಾರಾವ ಸಾಗಾಂವೆ ವಯ: 37 ವರ್ಷ, ಜಾತಿ: ಮರಾಠಾ, ಸಾ: ಇಂಚೂರ, ತಾ: ಭಾಲ್ಕಿ ಇತನು ಆಶಾ ಇವಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ, ಇತನಿಗೆ ಬಿಟ್ಟಿ ಬಿಡ್ರಿ ನಾವು ನೋಡಿಕೊಳ್ಳುತ್ತೆವೆ, ಆಸ್ಪತ್ರೆಗೆ ಹೋಗಲು ಬಿಡುವುದಿಲ್ಲ ಅಂತ ಸಕರ್ಾರಿ ಕರ್ತವ್ಯದಲ್ಲಿದ್ದ ಫಿಯರ್ಾದಿ ದಿಲೀಪ ಸಾಗರ ಪಿಎಸ್ಐ ಹುಲಸೂರ ಪೊಲೀಸ ಠಾಣೆ ರವರಿಗೆ ಅಡೆ ತಡೆ ಉಂಟು ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಸಕರ್ಾರಿ ಕರ್ತವ್ಯ ನಿರ್ವಹಿಸದಂತೆ ಅಡ್ಡಿಪಡಿಸಿ ಸಕರ್ಾರಿ ಪೊಲೀಸ ಜೀಪಿಗೆ ಕಲ್ಲುಗಳು ಹೊಡೆದು, ಜೀಪಿ ಬಲಭಾಗದ ಗ್ಲಾಸ ಒಡೆದು ಲುಕ್ಸಾನ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಗುನ್ನೆ ನಂ 40/2012 ಕಲಂ 324, 504 ಐಪಿಸಿ :-

ದಿನಾಂಕ 09/02/2012 ರಂದು ಫಿರ್ಯಾದಿತಳಾದ ಕುಮಾರಿ ರಾಧಿಕಾ ತಂದೆ ನರಸಿಂಗ ಬಿರಾದಾರ ವಯ: 15 ವರ್ಷ, ಜಾತಿ: ಮರಾಠಾ, ಸಾ: ಇಂಚೂರ ಇಕೆಯ ತಾಯಿ ಆಶಾ ಇವಳ ಜೊತೆ ಆರೋಪಿ ದೇವಿದಾಸ ತಂದೆ ದಾದಾರಾವ ಸಾಗಾಂವೆ ವಯ: 37 ವರ್ಷ, ಜಾತಿ: ಮರಾಠಾ, ಸಾ: ಇಂಚೂರ, ಇತನು ಸುಮಾರು ದಿವಸಗಳಿಂದ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಸದರಿ ವಿಷಯವನ್ನು ಆರೋಪಿಗೆ ಕೆಳಲು ಹೋದರೆ ಆರೋಪಿಯು ಫಿಯರ್ಾದಿತಳಿಗೆ ನೀನು ನನಗೆ ಕೇಳುತ್ತಿ ಅಂತ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮುಖದ ಮೇಲೆ ಹೊಡೆದು ಜೋರಾಗಿ ನುಕಿದ್ದರಿಂದ ಫಿಯರ್ಾದಿತಳು ಟೇಬಲ ಮೇಲೆ ಬಿದ್ದು ಹಣೆಗೆ ಹತ್ತಿ ರಕ್ತಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.