May 8, 2012

BIDAR DISTRICT DAILY CRIME UPDATE 08-05-2012ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 08-05-2012

ಸಂತಪೂರ ಪೊಲೀಸ ಠಾಣೆ ಗುನ್ನೆ ನಂ. 26/12 ಕಲಂ 26/12 ಕಲಂ 87 ಕೆಪಿ  ಆಕ್ಟ್ :-

ದಿನಾಂಕ  07-05-2012 ರಂದು   ಜಿರ್ಗಾ (ಬಿ) ಗ್ರಾಮದಲ್ಲಿ ಹೊಟಲದಲ್ಲಿ ಕೆಲವು ಜನರು ಜೂಜಾಟ ಆಡುತ್ತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ  ಹೊಗಿ ಜೂಜಾಟ ಆಡುತಿದ್ದಾಗ ಸದರಿಯವರ ಮೇಲೆ ದಾಳಿ ಮಾಡಿ 1) ಧನರಾಜ ತಂದೆ ಅಣ್ಣೆಪ್ಪಾ ಬಂಬೂಳಗೆ 2)ಮಹೇಶ ತಂದೆ ರಾಮಚಂದರ ಬಂಬೂಳಗೆ 3) ಸಿದ್ದಪ್ಪಾ ತಂದೆ ಬಾಬು ಕೋಟೆ 4) ಶಿವಪುತ್ರ ತಂದೆ ವಿಶ್ವನಾಥ ಕೋಟೆ 5) ಕಲ್ಲಪ್ಪಾ ತಂದೆ ಧನರಾಜ ಧಪಾಟೆ 6)ಶಿವರಾಜ ತಂದೆ ಚನ್ನಪ್ಪಾ ತೂಗಾವೆ 7) ಶರಣಯ್ಯಾ ತಂದೆ ಮಾದಯ್ಯಾ ಸ್ವಾಮಿ 8) ಕಾಶಿನಾಥ ತಂದೆ ಸಿದ್ರಾಮಪ್ಪಾ ಛಪಾಟೆ ಎಲ್ಲರೂ ಸಾ: ಜೀಗರ್ಾ (ಬಿ) ರವರಿಗೆ ಹಿಡಿದುಕೊಂಡು ಸದರಿಯವರ ವಶದಲ್ಲಿ ಇದ್ದು ರೂ. 1450/- ರೂ ಮತ್ತು 52 ಇಸ್ಪೇಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದು ಇರುತ್ತದೆ. ಇನ್ನೊಬ್ಬ ಆರೋಪಿ ಶಿವಕುಮಾರ ತಂದೆ ವೈಜಿನಾಥ ಮಾಲೀಪಾಟೀಲ ಸಾ: ಜೀರ್ಗಾ (ಬಿ) ಇತನ್ನು ಓಡಿ ಹೋಗಿರುತ್ತಾನೆ. ಅವರುಗಳು ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮುಡಬಿ ಪೊಲೀಸ್ ಠಾಣೆ ಗುನ್ನೆ ನಂ. 44/12 ಕಲಂ 279.337.338.ಐಪಿಸಿ ಜೋತೆ 187 ಐಎಮ್ ವಿ ಕಾಯ್ದೆ :-

ದಿನಾಂಕ: 07-05-2012 ರಂದು 1515 ಗಂಟೆಗೆ ಸರ್ಕಾರಿ ಆಸ್ಪತ್ರೆಯಿಂದ ಮಾಹಿತಿ ಬಂದಿದ ಮೇರೆಗ ಆಸ್ಪತ್ರೆಗೆ ಭೇಟಿ ನೀಡಿ ವಾಹನ ಅಪಘಾತದಲ್ಲಿ ಗಾಯಗೊಂಡ ಗಾಯಾಳು ಗುಂಡಪ್ಪಾ ತಂದೆ ಮಾರುತೆಪ್ಪಾ ಪಾಂಚಾಳ ಸಾ : ಖೇಡರ್ಾ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಫಿಯರ್ಾದಿ ಹಾಗು ಇನ್ನೂ ಇಬ್ಬರು ಆಟೋದಲ್ಲಿ ಕುಳಿತು ಮುಡಬಿಯಿಂದ ಖೇಡರ್ಾ ಕಡೆಗೆ ಹೊರಟು ಹಿರನಾಗಾಂವ ಕಾಳಮಂದಗರ ಕಡೆಗೆ ಹೋಗುವ ರಸ್ತೆ ಬಲಗಡೆ ಆಟೋ ನಂ.ಕೆಎ-39-2596 ನೇದರ ಚಾಲಕ ತನ್ನ ಆಟೋವನ್ನು ಅತೀ ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿದರಿಂದ ಗಾಯಗಳಾಗಿರುತ್ತವೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.