July 10, 2012

BIDAR DISTRICT DAILY CRIME UPDATE 09-07-2012

                                     ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ:10-07-2012


ಧನ್ನೂರ ಠಾಣೆ ಗುನ್ನೆ ನಂ. 108/12 ಕಲಂ 427, 431 ಐಪಿಸಿ :-

ದಿ: 08/07/2012 ರಂದು 1730 ಗಂಟೆಗೆ ಫೀರ್ಯಾದಿ ಶ್ರೀ ಬಾಬುರಾವ ತಂದೆ ಮರೇಪ್ಪಾ ಅಡಕಿ, 32 ವರ್ಷ, ಸಾ/ ಕೆ.ಹೆಚ್.ಬಿ. ಕಾಲೋನಿ ಬೀದರ ರವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ನೀಡಿದರ ಸಾರಾಂಶ ವೆನೆಂದರೆ, ದಿ:02/07/2012 ರಂದು ರಾತ್ರಿ ವೇಳೆಯಲ್ಲಿ ನೀಲಂನಳ್ಳಿ ಶಿಮಾಂತರದ ಬಾಳು ಕುಲಕರ್ಣಿ, ಸುಭಾಷ ಕಾರಬಾರಿ ಪಾಂಡುರಂಗ ಮತ್ತು ಸುತ್ತ ಮುತ್ತಲಿನ ಹೊಲದ ಹತ್ತಿರದಲ್ಲಿ 300 ರಿಂದ 400 ಮೀಟರ ವರೆಗೆ ಪೂರ್ಣಗೊಂಡ ಕಾಮಗಾರಿಯನ್ನು ಯಾರೋ ಅಪರಿಚಿತರು ಉದ್ದೇಶ ಪೂರ್ವಕವಾಗಿ ನಿರ್ಮಾಣ ಗೊಂಡ ಕಾರಾಂಜಾ ಕಾಲುವೆಯನ್ನು ಜಾಗೆಯಲ್ಲಿ ಒಡೆದು ಅಂದಾಜು 25 ರಿಂದ 30 ಸಾವಿರ ರೂಪಾಯಿ ಲುಕ್ಷಾನ ಮಾಡಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 173/12 ಕಲಂ 279, 337 ಐಪಿಸಿ ಜೊತೆ 187 ಐಎಮ್ವಿ ಕಾಯ್ದೆ :-

ದಿನಾಂಕ 09/07/2012 ರಂದು 0840 ಗಂಟೆಗೆ ಫಿರ್ಯಾದಿ ವಿಲಾಸರಾವ ತಂದೆ ವಾಸುದೇವರಾವ ಪಾಟೀಲ, ರವರು ತನ್ನ ಮೋಟಾರ ಸೈಕಲ ನಂ. ಕೆಎ38ಜೆ2482 ನೇದರಲ್ಲಿ ತನ್ನ ಮನೆಯಿಂದ ಚಿದ್ರಿ-ಏರ್ ಫೋರ್ಸ ಬೈಪಾಸ ರೋಡ ಮುಖಾಂತರ ಕೊಳಾರ(ಕೆ) ಇಂಡಸ್ಟ್ರಿಯಲ ಎರಿಯಾ ಕಡೆಗೆ ಹೊಗುತ್ತಿದ್ದಾಗ ಚಿದ್ರಿ ಜನತಾ ಕಾಲೋನಿಯಲ್ಲಿ ಎದುರಿನಿಂದ ರವೀಂದ್ರ ಶಾಲೆಯ ಮಾರುತಿ ಓಮ್ನಿ ವ್ಯಾನ ನಂ. ಕೆಎ32ಯು1826 ನೇದನ್ನು ಅದರ ಚಾಲಕ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ದುಡುಕಿನಿಂದ, ನಿರ್ಲಕ್ಷ್ಯದಿಂದ ನಡೆಸಿಕೊಂಡು ಬಂದು ಫಿಯರ್ಾದಿಯ ಮೋಟಾರ ಸೈಕಲಿಗೆ ಡಿಕ್ಕಿಪಡಿಸಿದರಿಂದ ಅಪಘಾತ ಸಂಭವಿಸಿ ಫಿಯರ್ಾದಿಯ ಎಡ ಗಲ್ಲದ ಕೆಳ ಭಾಗಕ್ಕೆ, ಎಡ ಭುಜಕ್ಕೆ, ಬಲ ಪಾದದ ಮೇಲ್ಬದಿಗೆ ತರಚಿದ ಗಾಯ ಮತ್ತು ಗುಪ್ತ ಗಾಯವಾಗಿದೆ. ಆರೋಪಿತನು ಅದೆ ವಾಹನದಲ್ಲಿ ಸಿದ್ದಾರೂಢ ಚಾರಿಟೇಬಲ ಆಸ್ಪತ್ರೆಗೆ ತಂದು ವಾಹನ ಸಹಿತ ಓಡಿ ಹೊಗಿರುತ್ತಾನೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಔರಾದ(ಬಿ) ಪೊಲೀಸ ಠಾಣೆ ಗುನ್ನೆ ನಂ. 59/12 ಕಲಂ 78(3) ಕೆಪಿ ಕಾಯ್ದೆ ಜೊತೆ 420 ಐಪಿಸಿ :-

ದಿನಾಂಕ: 09-07-2012 ರಂದು 1610 ಗಂಟೆಗೆ ಔರಾದ ಬಸ್ ನಿಲ್ದಾಣದ ಹತ್ತಿರ ಪ್ರಕಾಶ ತಂದೆ ಮಷ್ಣಾಜಿ ಹಾಗೂ ಇನ್ನೂ 3 ಜನರುಗಳು ಇತರ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80 ರೂಪಾಯಿ ಕೋಡುತ್ತೆನೆ ಅಂತಾ ಅಂದು ಹಣ ಪಡೆದು ಮೋಸ ಮಾಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಎಎಸ್ಐ ಸುಭಾಷ್ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಅವರ ವಶದಿಂದ ರೂ. 6110/- ನಗದು ಮತ್ತು ಒಂದು ಮಟಕಾ ಚೀಟಿ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಔರಾದ(ಬಿ) ಪೊಲೀಸ ಠಾಣೆ ಗುನ್ನೆ ನಂ. 60/12 ಕಲಂ 87 ಕೆಪಿ ಕಾಯ್ದೆ:-

ದಿನಾಂಕ: 09-07-2012 ರಂದು 1730 ಗಂಟೆಗೆ ಔರಾದ ಪಟ್ಟಣದ ಬಸ್ನಿಲ್ದಾಣದ ಹಿಂದೆ ಆರೋಪಿತರಾದ ಖಲೀಲ ತಂದೆ ಬಾಬು ಖಾನ ಹಾಗೂ ಇನ್ನು ಇಬ್ಬರು ಇಸ್ಪೇಟ್ ಎಲೆಗಳ ಮೇಲೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದಾಗ ಖಚಿತ ಬಾತ್ಮಿ ಮೇರೆಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರಿಂದ ನಗದು ಹಣ ಒಟ್ಟು 560/- ರೂ.ಗಳು ಮತ್ತು 52 ಇಸ್ಪಿಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರರಕಣ ಆರೋಪಿತರನ್ನು ದಸ್ತಗೀರಿ ಮಾಡಿ ಅವರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.