July 7, 2012

BIDAR DISTRICT DAILY CRIME UPDATE 07-07-2012

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 07-06-2012


ಭಾಲ್ಕಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 111/12 ಕಲಂ 379 ಐಪಿಸಿ :-

ದಿನಾಂಕ: 06/07/2012 ರಂದು 1300 ಗಂಟೆಗೆ ಫಿರ್ಯಾದಿ ಆಶೋಕ ತಂದೆ ಜಗನ್ನಾಥ ವ/23 ವರ್ಷ ಸಾ/ಶಮಶಾರಪೂರ ವಾಡಿ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ ವೆನೆಂದರೆ ದಿನಾಂಕ: 02/07/2012 ರಂದು 1500 ಗಂಟೆಗೆ ತನ್ನ ಹೀರೊ ಹೊಂಡಾ ಸ್ಪೇಂಡರ ಪ್ಲಸ್ ಕೆ.ಎ/39 ಜೆ/4641 ಆ/ಕಿ. 15,000/- ಬೆಲೆ ಉಳ್ಳದ್ದು ತೆಗೆದುಕೊಂಡು ತಹಸಿಲ ಕಛೇರಿಗೆ ಖಾಸಗಿ ಕೆಲಸಕ್ಕೆ ಬಂದು ಮೂಟಾರ ಸೈಕಲ ನಿಲ್ಲಿಸಿ ಒಳಗೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಬಂದು ನೋಡಲು ಮೂಟಾರ ಸೈಕಲ ಇರಿಲಿಲ್ಲ , ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ನಾನು ಎಲ್ಲ ಕಡೆ ಹೂಡಕಾಡಿ ಬಂದು ಅರ್ಜಿ ಕೂಡಲು ವಿಳಂಬ ವಾಗಿದೆ . ಸದರಿ ಮೂಟಾರ ಸೈಕಲ ಹೀರೊ ಹೊಂಡಾ ಸ್ಪೆಲಂಡರ ಇದ್ದು ಅದರ ಇಂಜಿನ ನಂಬರ. ಹೆಚ್.ಎ 10ಇಎಎಹೆಚ್.ಬಿ.80532 ಚೆಸ್ಸಿಸ್ ನಂಬರ-ಎಮ್.ಬಿ.ಎಲ್.ಹೆಚ್.ಎ10ಇಜೆಎಹೆಚ್.ಬಿ29922 ನೇದ್ದು ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದ

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 75/12 ಕಲಂ ಕಲಂ 78(3) ಕೆ.ಪಿ. ಕಾಯ್ದೆ :-

ದಿನಾಂಕ 06/07/2012 ರಂದು ಪಿಎಸ್ಐ ರವರು ಪೆಟ್ರೋಲಿಂಗ ಕರ್ತವ್ಯ ನಿರ್ವಹಿಸುತ್ತಿರುವಾಗ ಖಚಿತ ಮಾಹಿತಿ ಸಿಕ್ಕ ಮೇರೆಗೆ ಮೋರಖಂಡಿ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಅಗಸಿಯ ಹತ್ತಿರ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಎಂಬ ನಸಿಬಿನ ಜೂಜಾಟ ಬರೆದುಕೋಳ್ಳುತ್ತಿದ್ದಾನೆ ಅಂತ ಬಂದ ಮಾಹಿತಿ ಮೇರೆಗೆ ಪಿಎಸ್ಐ ಮತ್ತು ಸಿಬ್ಬಂದಿಯವರಾದ ಸಿಪಿಸಿ-1311, 1723, 940 ರವರೊಂದಿಗೆ ಮೋರಖಂಡಿ ಗ್ರಾಮಕ್ಕೆ ಹೋಗಿ ದಾಳಿ ಮಾಡಿ ಜ್ಞಾನೇಶ್ವರ ತಂದೆ ಶ್ರೀರಂಗ ನಿಗಲೆ ಸಾ!! ಮೋರಖಂಡಿ ಇತನ್ನು ಬಂಧಿಸಿ ನಗದು ಹಣ ರೂ. 350, ಒಂದು ಮಟಕಾ ನಂಬರವುಳ್ಳ ಚೀಟಿ ಹಾಗೂ ಒಂದು ಬಾಲಪೆನ ಪಂಚರ ಸಮಕ್ಷಮ ದಾಳಿ ಮಾಡಿ ಜಪ್ತಿ ಮಾಡಿಕೊಂಡು ಅವನಿಗೆ ದಸ್ತಗಿರಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಮಾರ್ಕೇಟ್ ಪೊಲೀಸ ಠಾಣೆ ಗುನ್ನೆ ನಂ. 89/12 ಕಲಂ 498 (ಎ), 323, 504, 506 ಐಪಿಸಿ :-

ದಿನಾಂಕ 06-07-2012 ರಂದು 2030 ಗಂಟೆಗೆ ಫಿರ್ಯಾದಿ ಶ್ರೀಮತಿ ಪರಿಮಳಾ ಭಾಸ್ಕರ ಗಂಡ ಡೇವಿಡ್ ಉ: ಉಪನ್ಯಾಸಕಿ, ಸಾ: ಬೆತ್ಲೆಹೇಮ ಕಾಲೋನಿ ಬೀದರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆದಂರೆ ದಿನಾಂಕ 06-07-2012 ರಂದು ಮುಂಜಾನೆ 0800 ಗಂಟೆಗೆ ಬೆತ್ಲೆಹೇಮ ಕಾಲೋನಿಯ ಮನೆಯಲ್ಲಿ ಇದ್ದಾಗ ಫಿರ್ಯಾದಿಗಂಡ ಡೇವಿಡ ಈತನು ಮನೆಗೆ ಬಂದು ಅವಾಚ್ಯವಾಗಿ ಬೈದು ನೀನು ವಗರ್ಾವಣೆ ಮಾಡಿಕೊಂಡು ಬೀದರಕ್ಕೆ ಬಂದರೆ ನಾನು ಬೀಡುತ್ತೆನೆ ಅಂತ ಅಂದಕೊಂಡಿದಿಯಾ, ಅಂತಾ ಹೇಳಿ ಕೈಯಿಂದ ಹೊಡೆಮಾಡಿ ಕಿರುಕುಳ ಮಾಡಿರುತ್ತಾನೆ ನೀನಗೆ ಬಿಡುವದಿಲ್ಲ ಖತಮ ಮಾಡುತ್ತೆನೆ ಅಂತ ಜೀವದ ಬೇದರಿಕೆ ಹಾಕಿರುತ್ತಾನೆ ಆಗ ಮನೆಯಲ್ಲಿ ಕೆಲಸ ಮಾಡುವ ಮಾರತ ತಂದೆ ನರಸಪ್ಪಾ ಇವಳು ಮತ್ತು ಪ್ರಕಾಶ ತಂದೆ ಜೆಮ್ಸ, ನೋಹನ ತಂದೆ ಮಾಣಿಕ ರವರು ಬಂದು ನೋಡಿ ಬಿಡಿಸಿಕೊಂಡಿರುತ್ತಾರೆ ಆದ ಕಾರಣ ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಗಂಡ ಡೇವಿಡ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆದು ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ. 77/12 ಕಲಂ 279, 337 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ: 06-07-2012 ರಂದು 9-00 ಗಂಟೆಗೆ ಅಂಬೆಸಾಂಗವಿ ಗ್ರಾಮದ ಬೀರಲಿಂಗೇಶ್ವರ ಗುಡಿಯ ಹಿಂದೆ ಇರುವ ಅಂಬೆಸಾಂಗ್ವಿ ಭಾಲ್ಕಿ ರೋಡಿನ ಮೇಲಿಂದ ಫಿಯರ್ಾದಿ ಸಂಬಾಜಿ ತಂದೆ ರಾಮಜಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಒಬ್ಬ ಮೋಟಾರ ಸೈಕಲ ಸವಾರನು ತನ್ನ ಬೈಕನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಮಾಡಿದ ಪ್ರಯುಕ್ತ ಫಿರ್ಯಾದಿಗೆ ಎಡ ಸೊಂಟಕ್ಕೆ ಮತ್ತು ಎಡ ಮೊಳಕಾಲಿನ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ