July 2, 2012

BIDAR DISTRICT DAILY CRIME UPDATE 02-07-2012

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 02-07-2012

ನೂತನ ನಗರ ಪೊಲೀಸ್ ಠಾಣೆ ಬೀದರ ಗುನ್ನೆ ನಂ. 147/12 ಕಲಂ 32, 34 ಕೆ.ಇ, ಕಾಯ್ದೆ :-

ದಿನಾಂಕ 01-07-2012 ರಂದು 0900 ಗಂಟೆಗೆ ಪಿಎಸ್ಐ ರವರು ಖಚಿತ ಮಾಹಿತಿ ಬಂದಿದ ಮೇರೆಗೆ, ಸಿಂದೋಲ್ ಪೆಟ್ರೋಲ್ ಪಂಪ್ ಹಿಂದುಗಡೆ ಆರೋಫಿತರಾದ ಅನೀಲ ತಂದೆ ಬಾಬು ಮೇತ್ರೆ ಇತನು ಸರಾಯಿ ಬಾಟಲಿಗಳನ್ನು ಒಂದು ಕೈ ಚೀಲದಲ್ಲಿ ಹಾಕಿಕೊಂಡು ಮಾರಾಟ ಮಾಡುವ ಸಲುವಾಗಿ ತೆಗೆದುಕೊಂಡು ಹೋಗುತ್ತಿದ್ದಾಗ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಅವನ ವಶದಿಂದ ಓರಿಜಿನಲ್ ಚಾಯಿಸ್ ಡಿಲಕ್ಸ್ ವಿಸ್ಕಿಯ 90 ಎಂ.ಎಲ್ವುಳ್ಳ 63 ಬಾಟಲಿಗಳು ಅಂ.ಕಿ 1,764/- ರೂಪಾಯಿ ಬೆಲೆ ಬಾಳುವ ಸರಾಯಿ ಬಾಟಲಿಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸಂತಪೂರ ಪೊಲೀಸ ಠಾಣೆ ಗುನ್ನೆ ನಂ. 45/12 ಕಲಂ 279,337,338 ಐಪಿಸಿ ಜೋತೆ 187 ಐ ಎಂ ವಿ ಎಕ್ಟ :-

ದಿನಾಂಕ 01-07-2012 ರಂದು 1600 ಗಂಟೆಗೆ ಫಿರ್ಯಾದಿ ಬಸವರಾಜ ತಂದೆ ವಿಶ್ವನಾಥ ಘೋಡಪಳ್ಳೆ ವಯ : 42 ವರ್ಷ ಔರಾದದಿಂದ ಅಲಿಯಂಬರ ಗ್ರಾಮಕ್ಕೆ ಕೆ.ಎಸ.ಆರ್.ಟಿ.ಸಿ ಬಸ ನಂ ಕೆಎ-38-ಎಫ್-434 ನೇದ್ದರಲ್ಲಿ ಹೋಗುವಾಗ ಬೀದರ ಔರಾದ ರೋಡಿನ ಮೇಲೆ ಕೌಡಗಾಂವ ಬಲ್ಲೂರ ಮಧ್ಯದಲಿ ಸದರಿ ಬಸ ಚಾಲಕನು ತನ್ನ ಬಸ್ ಅತೀ ವೇಗ ಹಾಗು ನಿಷ್ಕಾಳಜಿಯಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಮುಂದೆ ಹೋಗುತ್ತಿದ್ದ ಟಿಪ್ಪರ ನಂ ಕೆಎ38/6268 ನೇದ್ದಕ್ಕೆ ಅಪಘಾತ ಮಾಡಿರುತ್ತಾನೆ ಸದರಿ ಅಪಘಾತದಿಂದ ಫಿರ್ಯಾದಿಗೆ ಎದೆಗೆ ಗುಪ್ತಗಾಯವಾಗಿರುತ್ತದೆ ಹಾಗು ಸದರಿ ಬಸ್ಸಿನಲ್ಲಿದ್ದ ಇತರೆ ಜನರಿಗೆ ಸಾದಾ ಹಾಗು ಭಾರಿ ರಕ್ತಗಾಯ ಗುಪ್ತಗಾಯಗಳಾಗಿರುತ್ತವೆ ಸದರಿ ಬಸ ಚಾಲಕ ಜೈಭೀಮ ಬಸ ಸ್ಥಳದಲ್ಲೆ ಬಿಟ್ಟು ಓಡಿಹೊಗಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಗುನ್ನೆ ನಂ. 151/12 ಕಲಂ 187 ಕೆ.ಪಿ. ಕಾಯ್ದೆ :-

ದಿನಾಂಕ 01/07/2012 ರಂದು 1600 ಗಂಟೆಗೆ ಖಚಿತ ಬಾತ್ಮಿ ಮೇರೆಗೆ ಶ್ರೀ ಎನ್ ಎಮ್ ಪಾಟೀಲ ಬಾಗಲಕೊಟ ಪಿ.ಐ ಡಿ.ಸಿ.ಐ.ಬಿ ಬೀದರ ಮತ್ತು ಬೀದರ ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿ ಮತ್ತು ಹುಲಸುರು ಠಾಣೆಯ ಪಿಎಸ್ಐ ಹಾಗು ಸಿಬ್ಬಂದಿ ರವರುಗಳೊಂದಿಗೆ ಗ್ರಾಮದಲ್ಲಿರುವ ಬಸವೇಶ್ವರ ಚೌಕ ಸಮೀಪ ಸಾಜೀದ ಕೋತ್ತವಾಲ ಚಹಾ ಹೋಟಲ್ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನ ಇಸ್ಪೀಟ್ ಎಲೆಯ ಅಂದರ ಬಾಹರ ಎಂಬ ನಸೀಬಿನ ಜೂಜಾಟ ಹಣವನ್ನು ಪಣಕ್ಕೆ ಹಚ್ಚಿ ಆಡುತ್ತಿದ್ದಾಗ ಅವರುಗಳ ಮೇಲೆ ದಾಳಿ ಮಾಡಿ 1) ಬಸವರಾಜ ತಂದೆ ವೈಜಿನಾಥ ಬಿರಗೆ ವಯ: 32 ವರ್ಷ ಜಾ: ಲಿಂಗಾಯತ ಉ: ಕೂಲಿ ಕೆಲಸ ಸಾ: ಹುಲಸೂರ ಈತನ ವಶದಿಂದ ಜೂಜಾಟಕ್ಕೆ ಬಳಸಿದ 5000/- ರೂ ಹಾಗು ಇಸ್ಪೀಟ್ ಎಲೆಗಳು 2) ಚನ್ನಪ್ಪ ತಂದೆ ಸಿದ್ರಾಮಪ್ಪಾ ಅದ್ದೇಪ್ಪ ವಯ: 48 ವರ್ಷ ಜಾ: ಲಿಂಗಾಯತ ಉ: ಡ್ರೈವರ ಕೆಲಸ ಸಾ: ಹುಲಸೂರ ಈತನ ವಶದಿಂದ ಜೂಜಾಟಕ್ಕೆ ಬಳಸಿದ 3000/- ರೂ ಹಾಗು ಇಸ್ಪೀಟ್ ಎಲೆಗಳು 3) ರಾಜಕುಮಾರ ತಂದೆ ಚಂದ್ರಪ್ಪಾ ಮಂಗಾ ವಯ: 42 ವರ್ಷ ಜಾ: ಲಿಂಗಾಯತ ಉ: ಒಕ್ಕಲುತನ ಕೆಲಸ ಸಾ: ಹುಲಸೂರ ಈತನ ವಶದಿಂದ ಜೂಜಾಟಕ್ಕೆ ಬಳಸಿದ 2000/- ರೂ ಹಾಗು ಇಸ್ಪೀಟ್ ಎಲೆಗಳು 4) ರಾಮೇಶ್ವರ ತಂದೆ ವೈಜಿನಾಥ ತೋಗಲೂರೆ ವಯ: 22 ವರ್ಷ ಜಾ: ಲಿಂಗಾಯತ ಉ: ಕೂಲಿ ಕೆಲಸ ಸಾ: ಹುಲಸೂರ ಈತನ ವಶದಿಂದ ಜೂಜಾಟಕ್ಕೆ ಬಳಸಿದ 1500/- ರೂ ಹಾಗು ಇಸ್ಪೀಟ್ ಎಲೆಗಳು 5) ರವೀಂದ್ರ ತಂದೆ ವಿಶ್ವನಾಥ ನಂಜವಾಡೆ ವಯ: 25 ವರ್ಷ ಜಾ: ಲಿಂಗಾಯತ ಉ: ಡ್ರೈವರ ಕೆಲಸ ಸಾ: ಹುಲಸೂರ ಈತನ ವಶದಿಂದ ಜೂಜಾಟಕ್ಕೆ ಬಳಸಿದ 1500/- ರೂ ಹಾಗು ಇಸ್ಪೀಟ್ ಎಲೆಗಳು 6) ರುಕ್ಮೋದ್ದಿನ್ ತಂದೆ ಮೌಲಖಾನ ವಯ: 41 ವರ್ಷ ಜಾ: ಮುಸ್ಲಿಂ ಉ: ಕೂಲಿ ಕೆಲಸ ಸಾ: ಹುಲಸೂರ ಈತನ ವಶದಿಂದ ಜೂಜಾಟಕ್ಕೆ ಬಳಸಿದ 1000/- ರೂ ಹಾಗು ಇಸ್ಪೀಟ್ ಎಲೆಗಳು 7) ಸಂಗಪ್ಪಾ ತಂದೆ ವೈಜಿನಾಥ ಕೌಟೆ ವಯ: 45 ವರ್ಷ ಜಾ: ಲಿಂಗಾಯತ ಉ: ಸಹ ಶಿಕ್ಷಕ ಸಾ: ಹುಲಸೂರ ಈತನ ವಶದಿಂದ ಜೂಜಾಟಕ್ಕೆ ಬಳಸಿದ 2000/- ರೂ ಹಾಗು ಇಸ್ಪೀಟ್ ಎಲೆಗಳು 8) ಬಸವರಾಜ ತಂದೆ ಗುರುಬಸಪ್ಪಾ ವಟಗ್ಗೆ ವಯ: 34 ವರ್ಷ ಜಾ: ಲಿಂಗಾಯತ ಉ: ಪೋಸ್ಟಮಾನ ಸಾ: ಹುಲಸೂರ ಈತನ ವಶದಿಂದ ಜೂಜಾಟಕ್ಕೆ ಬಳಸಿದ 2500/- ರೂ ಹಾಗು ಇಸ್ಪೀಟ್ ಎಲೆಗಳು ಇದ್ದು ಎಲ್ಲರ ನಡುವೆ ಜುಜಾಟಕ್ಕೆ ಬಳಸಿದ 3240/- ರೂ ಹಾಗು ಇಸ್ಪೀಟ್ ಎಲೆಗಳು ಇದ್ದು ಹೀಗೆ ಜುಜಾಟಕ್ಕೆ ಬಳಸಿದ್ದ ಎಲ್ಲಾ ಒಟ್ಟು 21740/- ರೂಪಾಯಿ ಹಾಗು 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು ಅವರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಗುನ್ನೆ ನಂ. 92/12 ಕಲಂ 87 ಕೆ.ಪಿ. ಕಾಯ್ದೆ :-

ದಿನಾಂಕ 01/07/2012 ರಂದು 2100 ಗಂಟೆಗೆ ದುಬಲಗುಂಡಿ ಶಿವಾರದಲ್ಲಿ ಆರೋಪಿತರಾದ ಮಲ್ಲಿಕಾಜರ್ುನ ತಂದೆ ಬಂಡೆಪ್ಪಾ ಜೋಳದಾಬಕಾ ಹಾಗೂ ಇನ್ನೂ 6 ಜನರು ಇಸ್ಪೀಟ್ ಜೂಜಾಟ ಆಡುತ್ತಿದ್ದಾಗ ಎಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತರ ವಶದಿಂದ ಒಟ್ಟು 24000/- ರೂ ಹಾಗೂJJJ 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಗುನ್ನೆ ನಂ. 92/12 ಕಲಂ 143, 147, 148, 504, 506, 427, 353 ಜೊತೆ 149ಐಪಿಸಿ :-

ದಿನಾಂಕ 01/07/2012 ರಂದು 2230 ಗಂಟೆಗೆ ಫಿರ್ಯಾದಿ ಶ್ರೀ ಗೋಪಿಕಾನಾಥ ತಂದೆ ಕಂಟೇಪ್ಪ ವಯ 53 ವರ್ಷ ಉ|| ಉ.ಪ. ಅರಣ್ಯಾಧಿಕಾರಿ ಬೇನಚಿಂಚೋಳಿ ಶಾಖೆ ಹುಮನಾಬಾದ ವಲಯ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಚಿದರೆ ದಿನಾಂಕ 30/06/2012 ರಂದು ಫಿರ್ಯಾದಿ ಮತ್ತು ಅವರ ಸಿಬ್ಬಂದಿಯವರು ಅರಣ್ಯ ಇಲಾಖೆಯ ವತಿಯಿಂದ ಬುಲ್ಡೋಜರನಿಂದ ಮುಂಗಡ ಕಾಮಗಾರಿಯನ್ನು ಘಾಟಬೋರಾಳ ಗ್ರಾಮದ ಸರಕಾರಿ ಜಮೀನು ಸವರ್ೆ ನಂ. 460 ನೇದರಲ್ಲಿ ಕೆಲಸ ಮಾಡುವಾಗ ಸಂಜೆ ಸುಮಾರು 17:30 ಗಂಟೆಗೆ ಬುಲ್ಡೋಜರ ಅಪರೇಟರ ರಾಜು ತಂದೆ ಭೀಮ ಪವಾರ ಇತನಿಗೆ, ಕಂಠುನಾಯಕ ಥಾಂಡದ ಕೆಲವು ಜನರು ಅಕ್ರಮವಾಗಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಬಟ್ಟೆ ಹಿಡಿದು ಎಳೆದಾಡಿದಾಗ ಸದರಿಯವನು ಫಿಯರ್ಾದಿಗೆ ಫೋನ್ ಮಾಡಿ ಹೇಳಿದಾಗ ಸರಕಾರಿ ಕರ್ತವ್ಯದ ಮೇಲಿದ್ದ ಫಿರ್ಯಾದಿ ಮತ್ತು ಸಿಬ್ಬಂದಿಯವರು ಇಲಾಖೆಯ ಜೀಪ ನಂ. ಕೆಎ-38/ಜಿ-174 ನೇದರಲ್ಲಿ ಹೋಗಿ ಅವರನ್ನು ಸಮಜಾಯಿಸಿ ಸದರಿ ಜೀಪಿನಲ್ಲಿ ಕುಳಿತು ವಾಪಸ ಬರುವಾಗ ಸದರಿ ಥಾಂಡದ ಸಂತೋಷ ತಂದೆ ರೇಖು ಜಾಧವ ಹಾಗು ಇನ್ನು ಅನೇಕ ಜನರು ಧಿಡಿರನೆ ಗುಂಪು ಸೇರಿ ಫಿರ್ಯಾದಿ ಮತ್ತು ಸಿಬ್ಬಂದಿಯವರು ಕುಳಿತ ಜೀಪನ್ನು ಅಡ್ಡ ಹಾಕಿ ಸಮವಸ್ತ್ರದ ಮೇಲಿರುವ ಫಿರ್ಯಾದಿ ಮತ್ತು ಸಿಬ್ಬಂದಿಯವರನು ಜೀಪಿನಿಂದ ಹೊರಗೇಳೆದಾಡಿರುತ್ತಾರೆ. ಮತ್ತು ಸದರಿ ಜೀಪಿನ ಮೇಲೆ ಕಲ್ಲು ತೂರಾಟ ಮಾಡಿ ಜೀಪಿನ ಕಿಟಕಿ ಗಾಜುಗಳು ಒಡಿದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿರುತ್ತಾರೆ ಹಾಗು ಸರಕಾರಿ ಕೆಲಸದಲ್ಲಿ ಅಡೆತಡೆಯನುಂಟು ಮಾಡಿರುತ್ತಾರೆ. ಸದರಿ ವಿಷಯವನು ಮೇಲಾಧಿಕಾರಿಗಳಲ್ಲಿ ತಿಳಿಸಿ ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ಸಾರಂಶದ ಆಧಾರದ ಮೇರೆಗೆ ಪ್ರಕರಣ ದಾಖಲ ಮಾಡಿ ತನಿಖೆ ಕೈಕೊಳ್ಳಲಾಗಿದೆ.