August 27, 2012

BIDAR DISTRICT DAILY CRIME UPDATE 27-08-2012


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 27-08-2012

ಗಾಂಧಿ ಗಂಜ ಪೊಲೀಸ್ ಠಾಣೆ ಗುನ್ನೆ ನಂ. 133/12 ಕಲಂ 457, 380 ಐಪಿಸಿ :-

ದಿನಾಂಕ: 26-08-2012 ರಂದು. 1630 ಗಂಟೆಗೆ ಫಿರ್ಯಾದಿ ಬಾಬುರಾವ ತಂದೆ ಶಿವಶಂಕರ್ ಸಂಗಮಕರ್ ರವರು ಠಾಣೆಗೆ ಹಾಜರಾಗಿ ತಮ್ಮ ಲಿಖಿತ ದೂರು ನೀಡಿದ ಸಾರಾಂಶವೆನೆಂದರೆ, ದಿನಾಂಕ: 25-08-2012 ರಂದು  ಸಾಯಂಕಾಲ ಫಿರ್ಯಾದಿಯವರು ಅಲ್ಲಂ ಪ್ರಭು ನಗರದಲ್ಲಿರುವ ತಮ್ಮ ಮನೆಗೆ ಬೀಗ ಹಾಕಿಕೊಂಡು ಹೆಂಡತಿ ಮಕ್ಕಳೂಂದಿಗೆ ಕೆಲಸ ನಿಮಿತ್ಯೆ ಊರಿಗೆ ಹೋಗಿದ್ದು. ದಿನಾಂಕ: 25, 26-08-12 ರಂದು. ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು   ಬೀಗ ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲಿದ್ದ ಬಂಗಾರ 17 ಗ್ರಾಂ. (ಲಾಕೇಟ 09 ಗ್ರ್ರಾಂ ಕಿವಿಯ ಓಲೆ 08 ಗ್ರಾಂ)   ಅ.ಕಿ. 51000=00ಬೆಳ್ಳಿ  12 ತೊಲೆ  ಅ.ಕಿ. 6000=00 ನಗದು ಹಣ  ರೂ. 6300=00 ಕ್ಯಾಮರಾ ಒಂದು   ಅ.ಕಿ   7000=00 ಹೀಗೆ ಒಟ್ಟು.  70,300=00 ರೂ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತ ಕೊಟ್ಟ ಲಿಖಿತ ದೂರಿನ ಮೇರೆಗ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಂಠಾಳ ಪೊಲೀಸ್ ಠಾಣೆ ಗುನ್ನೆ ನಂ. 118/12 ಕಲಂ 279, 337, 338 ಐಪಿಸಿ ಜೊತೆ 187 ಐಎಮ್ವಿ ಕಾಯ್ದೆ :-

ದಿನಾಂಕ 26/08/2012 ರಂದು ಫಿರ್ಯಾದಿ ಗೌಸಖಾನ ತಂದೆ ಮೆಹತಬ ಸಾಬ  ಪಠಾಣ ಮತ್ತು ಆತನ ಜೊತೆ ಸಂಮೇಶ್ವರ ತಂದೆ ವೈಜಿನಾಥ  ಹಾಗು ಅಮರ ತಂದೆ ಚನ್ನಪಾ ಮೂರು ಜನರು ಕೂಡಿಕೊಂಡು ಮಹಾರಾಷ್ಟ್ರದಲ್ಲಿ ಸಿಂಧಿ ಕುಡಿದು ಮನ್ನಳ್ಳಿ ಶಿವಾರದ ಕಡೆಗೆ ವಾಹನ ಸಂ ಎಂಎಚ್-24/ಯು-6847 ನೇದರ ಮೇಲೆ ಕುಳಿತುಕೊಂಡು ಬರುವಾಗ ಸಂಗಮೇಶ ಇತನು ಸಿಂಧಿ ಕುಡಿದ ಅಮಲಿನಲ್ಲಿ ತನ್ನ ವಾಹನವನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ಮೋಟಾರು ಸೈಕಲ ಹಿಡಿತ ತಪ್ಪಿ ಕಡವಿದ್ದರಿಂದ ಫಿರ್ಯಾದಿಗೆ ಮತ್ತು ಸಂಗಮೇಶನಿಗೆ ತುಟಿ ಮೇಲೆ ಕುತ್ತಿಗೆ ಮೇಲೆ ಎಡಕಪಾಳಕ್ಕೆ ಹತ್ತಿ ಭಾರಿ ರಕ್ತಗಾಯವಾಗಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಗುನ್ನೆ ನಂ. 127/12 ಕಲಂ 34, 363 ಐಪಿಸಿ :-

ದಿನಾಂಕ : 26-08-2012 ರಂದು 1030 ಗಂಟೆಗೆ ಫಿರ್ಯಾದಿ ಶ್ರೀಮತಿ. ರೇಣುಕಾ ಗಂಡ ದೆವಿದಾಸ ಮಾನಕಾರಿ ಸಾ: ಜನತಾ ಕಾಲೋನಿ ಭಾಲ್ಕಿ ರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿ : 24-08-2012 ರಂದು 1630 ಗಂಟೆಗೆ ಫಿರ್ಯಾದಿ ಮತ್ತು ಅವರ ಗಂಡ ಮನೆಯಲ್ಲಿದ್ದಾಗ ಚಂದ್ರಶೇಖರ ಸಾ: ಹುನಗುಂದ ಜಿಲ್ಲೆ: ಬಾಗಲಕೋಟ ಮತ್ತು ಇನ್ನೋಬ್ಬ ಅಪರಿಚಿತ ವ್ಯಕ್ತಿ ಬಂದು ಫಿಯಾದಿ ಕರೆದು ಫಿರ್ಯಾದಿ ಪತಿಗೆ ನನ್ನ ಜೊತೆ ನಡೆಯಿರಿ ಅಂತಾ ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಕೂಡಿಸಿಕೊಂಡು ಅಪಹರಿಸಿಕೊಂಡು ಹೊಗಿರುತ್ತಾರೆ ಅಂತಾ ಫಿರ್ಯಾದಿ ರವರು ನಿಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಗುನ್ನೆ ನಂ. 179/12 ಕಲಂ 279, 338 ಐಪಿಸಿ :-

ದಿ: 26/08/2012 ರಂದು 0100 ಗಂಟೆಯ ಸುಮಾರಿಗೆ ಹುಲಸೂರ ಗ್ರಾಮದ ಶ್ರೀ ಸದ್ದಾಮಹುಸೇನ ತಂದೆ ಖದೀರಸಾಬ ಜಂಗಿ ವಯ: 23 ವರ್ಷ  ಮತ್ತು ರವೀಂದ್ರ ತಂದೆ ವಿಶ್ವನಾಥ ನಂಜವಾಡೆ ವಯ: 24 ವರ್ಷ  ರವರು ಕೂಡಿಕೊಂಡು ಹೀರೋ ಹುಂಡಾ   ಮೋ.ಸೈ ನಂ: ಕೆ.ಎ-39/ಜೆ1483 ನೇದರ ಮೇಲೆ  ಕೊಂಗಳಿ ಗ್ರಾಮಕ್ಕೆ ಹೋಗಿ ಮರಳಿ  ಬರುತ್ತಿರುವಾಗ ರವೀಂದ್ರ   ಮೋ.ಸೈಕಲ ಚಲಾಯಿಸುತ್ತಿದ್ದು ಫಿರ್ಯಾದಿ ಹಿಂದೆ ಕುಳಿತ್ತಿದ್ದು, ರವಿಂದ್ರ ಇತನು ತನ್ನ ಮೋ.ಸೈಕಲ  ಅತೀ ವೇಗೆ ಹಾಗೂ ನಿಷ್ಕಾಳಜಿತನದಿಂದ ವೇಗವಾಗಿ ಚಲಾಯಿಸಿಕೊಂಡು ಹುಲಸೂರ ಶಿವಾರದ ಕೊಂಗಳಿ ಕ್ರಾಸ ಹತ್ತಿ ಚರ್ಚ ಹತ್ತಿರ  ಬ್ರೇಕ್ ಮಾಡಿ ಪಲ್ಟಿ ಮಾಡಿದ್ದರಿಂದ ಫಿರ್ಯಾದಿಗೆ ರಕ್ತವಾಗಿದ್ದರಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.