January 16, 2012

BIDAR DISTRICT DAILY CRIME UPDATE 16-01-2012

ದಿನಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 16-01-2012


 

ಬೇಮಳಖೇಡಾ ಪೊಲೀಸ ಠಾಣೆ ಯು.ಡಿ.ಆರ್ ನಂ 01/2012 ಕಲಂ 174 ಸಿ.ಆರ್.ಪಿ.ಸಿ :-

ದಿನಾಂಕ 14/01/2012 ರಂದು ಮೃತ ವೀರಶೆಟ್ಟಿ @ ಕಂಟೆಪ್ಪಾ ತಂದೆ ಚಂದ್ರಪ್ಪಾ ದಂಡಿನ ವಯ: 36 ವರ್ಷ, ಜಾತಿ: ಎಸ್. ಸಿ. ಹೊಲಿಯಾ, ಸಾ: ಬೇಮಳಖೇಡಾ ಇತನು ಊಟ ಮಾಡಿಕೊಂಡು ಮನೆಯಿಂದ ಬೇಮಳಖೇಡಾ ಶಿವಾರದಲ್ಲಿನ ತಮ್ಮ ಹೊಲ ಸವರ್ೆ ನಂ 391/ಎ ನೇದರಲ್ಲಿರುವ ಜೋಳದ ಬೆಳೆ ಕಾಯಲು ಹೋಗಿ ಚಪ್ಪಲಿ ತೆಗೆದು ಹೊಲದ ಕಟ್ಟೆಯ ಮೇಲೆ ಕುಳಿತ್ತಿದ್ದಾಗ ರಾತ್ರಿ 9 ಗಂಟೆಗೆ ಯಾವುದೊ ವಿಷ ಜಂತು ಬಲಗಾಲಿನ ಹೆಬ್ಬೆರಳಿನ ಪಕ್ಕದ ಬೆರಳಿಗೆ ಕಚ್ಚಿದರಿಂದ ರಾತ್ರಿ 1100 ಗಂಟೆಗೆ ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಸಿದ್ದತೆಯಲ್ಲಿದ್ದಾಗ ತಮ್ಮ ವಾಸದ ಮನೆಯಲ್ಲಿ ಮೃತಪಟ್ಟಿರುತ್ತಾನೆಂದು ಫಿಯರ್ಾದಿ ನೀಲಮ್ಮಾ ಗಂಡ ವೀರಶೆಟ್ಟಿ @ ಕಂಟೆಪ್ಪಾ ದಂಡಿನ ವಯ: 30 ವರ್ಷ, ರವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.


 

ಚಿಟಗುಪ್ಪಾ ಪೊಲೀಸ್ ಠಾಣೆ ಗುನ್ನೆ ನಂ 06/2012 ಕಲಂ 324, 504 ಜೊತೆ 34 ಐಪಿಸಿ :-

ದಿನಾಂಕ 15/1/2012 ರಂದು ಫಿಯರ್ಾದಿ ಅಜರ್ುನರಾವ ತಂದೆ ದೇವಪ್ಪಾ ಶಿವನಾಯಕ ಸಾ : ಹಣಕುಣಿ ರವರು ಮನೆಯ ಕಡೆಗೆ ಹೋಗುವಾಗ ದಾರಿಯಲ್ಲಿ ಆರೋಪಿತರಾದ 1) ಶ್ಯಾಮರಾವ ತಂದೆ ಕಲ್ಲಪ್ಪಾ ಸಿದ್ದನ್ರೆರ, 2) ಮಾಣಿಕ ತಂದೆ ದ್ಯಾವಪ್ಪಾ ಸಿದ್ದನ್ರೆರ, 3) ರವಿ ತಂದೆ ಮಾಣಿಕ ಸಿದ್ದನ್ರೆರ, 4) ಉಮೇಶ ತಂದೆ ಶರಣಪ್ಪಾ ಸಿದ್ದನೊರ ಎಲ್ಲರೂ ಸಾ: ಹಣಕುಣ ಇವರೆಲ್ಲರೂ ಫಿಯರ್ಾದಿಗೆ ಹೊಲದ ವಿಷಯದ ಸಂಬಂಧ ಬಡಿಗೆಯಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆಂದು ಕೊಟ್ಟ ಫಿಯರ್ಾದಿ ಹೇಳಿಕೆ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


 

ಚಿಟಗುಪ್ಪಾ ಪೊಲೀಸ್ ಠಾಣೆ ಗುನ್ನೆ ನಂ 07/2012 ಕಲಂ 324, 504 ಜೊತೆ 34 ಐಪಿಸಿ :-

ದಿನಾಂಕ 15/1/2012 ರಂದು ಫಿಯರ್ಾದಿ ಮಾಣಿಕ ತಂದೆ ದ್ಯಾವಪ್ಪಾ ಸಿದ್ದನೊರ ಸಾ: ಹಣಕುಣಿ ರವರು ತಮ್ಮ ಮನೆಯ ಮುಂದೆ ರೋಡಿನ ಮೇಲೆ ಆರೋಪಿತರಾದ 1) ಅಜರ್ುನ ತಂದೆ ದ್ಯಾವಪ್ಪಾ ಶಿವನಾಯಕ, 2) ಪ್ರಭು ತಂದೆ ಮಾಣಿಕ ಶಿವನಾಯಕ, 3) ಅನೀಲ ತಂದೆ ಮಾಣಿಕ ಶಿವನಾಯಕ, 4) ಆನಂದ ತಂದೆ ಮಾಣಿಕ ಶಿವನಾಯಕ ಎಲ್ಲರೂ ಸಾ : ಹಣಕುಣಿ ಇವರೆಲ್ಲರೂ ಫಿಯರ್ಾದಿಗೆ ಹೊಲದ ವಿಷಯದ ಸಂಬಂಧ ಬಡಿಗೆಯಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆಂದು ಕೊಟ್ಟ ಫಿಯರ್ಾದಿ ಹೇಳಿಕೆ ಸಾರಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ 06/2012 ಕಲಂ 279, 304(ಎ) ಐಪಿಸಿ ಜೊತೆ 187 ಐಎಂವಿ ಆ್ಯಕ್ಟ್ :-

ದಿನಾಂಕ: 15-01-2012 ರಂದು ಆರೋಪಿ ಅಪ್ಪಿ ಆಟೋ ನಂ ಕೆಎ39-7655 ನೇದ್ದರ ಚಾಲಕ ಇತನು ಬೀರಿ(ಬಿ) ಗ್ರಾಮದ ಹತ್ತಿರ ತನ್ನ ವಾಹನವನ್ನು ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಧನರಾಜ ಈತನಿಗೆ ಡಿಕ್ಕಿ ಮಾಡಿ ವಾಹನ ಬಿಟ್ಟು ಓಡಿ ಹೋಗಿದ್ದು, ಡಿಕ್ಕಿಯ ಪರಿಣಾಮ ಧನರಾಜ ಈತನು ತೀವ್ರ ಗಾಯಹೊಂದಿ ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲಿ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿಯರ್ಾದಿ ಪ್ರಭುರಾವ ತಂದೆ ದೇವರಾವ ಬಿರಾದಾರ ಸಾ: ಬೀರಿ(ಬಿ) ರವರ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


 

ಹೊಕಣರ್ಾ ಪೊಲೀಸ ಠಾಣೆ ಗುನ್ನೆ ನಂ 01/2012 ಕಲಂ 341, 324, 504, 506 ಐಪಿಸಿ :-

ದಿನಾಂಕ 15/01/2012 ರಂದು ಫಿಯರ್ಾದಿ ಸಂತೋಷ ತಂದೆ ದೇವಿದಾಸ ವಯ: 26 ವರ್ಷ, ಸಾ: ಕುರುಬುರವಾಡಿ ಇತನು ಔರಾದದಿಂದ ಮೊಟಾರ ಸೈಕಲ ಮೇಲೆ ಕುರುಬುರವಾಡಿಗೆ ಬರುತ್ತಿದ್ದಾಗ ಮಾಳೆಗಾಂವ ನಾಯಕ್ ತಾಂಡಾದ ರೋಡಿನ ಪಕ್ಕದಲ್ಲಿ ಪ್ರಭು ಇತನ ಕಿರಾಣಿ ಅಂಗಡಿ ಹತ್ತಿರ ನಿಂತಾಗ ಪ್ರಭು ಇವರ ಮಗ ಸುನೀಲ ಜೊತೆ ಮಾತಾಡುತ್ತಾ ನಗುತ್ತಾ ಊರ ಕಡೆ ಹೊಗುತ್ತಿದ್ದಾಗ ಆರೋಪಿತರನಾದ ಸುನೀಲ ತಂದೆ ಸುಭಾಷ ವಯ: 32 ವರ್ಷ, ಸಾ: ಕುರುಬುರವಾಡಿ ಇತನು ಫಿಯರ್ಾದಿಯ ಮೊಟಾರ ಸೈಕಲ ಅಕ್ರಮವಾಗಿ ತಡೆದು ನೀನು ನನಗೆ ನೋಡಿ ಯಾಕೆ ನಗುತ್ತಿ ಅಂತ ಅವಾಚ್ಯವಾಗಿ ಬೈದು ಕಲ್ಲನು ತೆಗೆದುಕೊಂಡು ಫಿಯರ್ಾದಿಗೆ ನಡು ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿರುತ್ತಾನೆಂದು ಕೊಟ್ಟ ಫಿಯರ್ಾದಿ ಹೇಳಿಕೆ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


 

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ 12/2012 ಕಲಂ 279, 304(ಎ) ಐಪಿಸಿ ಜೊತೆ 187 ಐಎಂವಿ ಆ್ಯಕ್ಟ್ :-

ದಿನಾಂಕ 15-01-2012 ರಂದು ಆರೋಪಿ ಸುರೇಶ ತಂದೆ ತುಕಾರಾಮ ವಯ: 25 ವರ್ಷ, ಜಾತಿ: ಹೊಲಿಯ, ಸಾ: ಸಿಕಿಂದ್ರಾಬಾದ ವಾಡಿ, ತಾ: ಭಾಲ್ಕಿ ಈತನು ತನ್ನ ವಾಹನವನ್ನು ಹುಡಗಿ ಗ್ರಾಮದ ಹತ್ತಿರ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ್ದರಿಂದ ವಾಹನದ ಹಿಂದೆ ಕುಳಿತ ಸುಭಾಷ ಈತನು ರಸ್ತೆಯ ಮೇಲೆ ಬಿದ್ದಾಗ ಅಷ್ಟರಲ್ಲಿ ಹಿಂದಿನಿಂದ ಅಪರಿಚಿತ ವಾಹನ ಚಾಲಕನ ಇತನು ಸಹ ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆಯ ಮೇಲೆ ಬಿದ್ದ ಸುಭಾಷ ಈತನ ಮೇಲಿಂದ ವಾಹನ ಹಾಯಿಸಿಕೊಂಡು ಓಡಿ ಹೋಗಿದ್ದರಿಂದ ಸುಭಾಷ ಈತನು ತೀವ್ರ ರಕ್ತಗಾಯಗಳಾಗಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿಯರ್ಾದಿ ದೇವಿದಾಸ ತಂದೆ ಶಿವರಾಜ ಕೋಟೆ ವಯ: 26 ವರ್ಷ, ಜಾತಿ: ಕ್ರಿಶ್ಚನ, ಸಾ: ಇಂದಿರಾ ನಗರ ಹ್ಮಡಗಿ, ತಾ: ಹುಮನಾಬಾದ ರವರ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


 

ಮುಡಬಿ ಪೊಲೀಸ್ ಠಾಣೆ ಗುನ್ನೆ ನಂ 05/2012 ಕಲಂ 279, 337 ಐಪಿಸಿ ಜೊತೆ 187 ಐಎಂವಿ ಆ್ಯಕ್ಟ್ :-

ದಿನಾಂಕ 15-01-2012 ರಂದು ಫಿಯರ್ಾದಿ ರೀಹಾನಾಬಿಬೇಗಂ ಗಂಡ ಸೂರಿಜ ತೇಲಿ ವಯ: 45 ವರ್ಷ, ಸಾ: ಮುಡಬಿ ಇವರು ಯಲ್ಲಮ್ಮಾ ದೇವಿ ಜಾತ್ರೆಗೆ ತನ್ನ ಸಂಬಂಧಿಕ ಅಲಿಚಾಂದ ಇವನಿಗೆ ರೋಟ್ಟಿ ಬುತ್ತಿ ಕೋಡಲು ಸೈನಸ್ಸ ಗಂಡ ಅಲಿಚಾಂದ ರವರ ಜೊತೆಯಲ್ಲಿ ಹೋಗಿ ಬುತ್ತಿ ಕೋಟ್ಟು ಮರಳಿ ಬರುವಾಗ ಆರೋಪಿ ಅಪ್ಪಿ ಆಟೋ ನಂ. ಕೆ.ಎ-39/5658 ನೇದರಲ್ಲಿ ಕುಳಿತುಕೊಂಡು ಮುಡಬಿಗೆ ಬರುವಾಗ ಮುಡಬಿ ಬಸವಕಲ್ಯಾಣ ರೋಡಿನ ಮೇಲೆ ದೇಸಾಯಿ ರವರ ಹೋಲದ ಹತ್ತಿರ ಆರೋಪಿ ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಬರುತ್ತಿದ್ದ ಸುಜ್ಕಿ ಮೋಟಾರ್ ಸೈಕಲ್ ನಂ. ಎಪಿ-07/ಸಿ-1161 ನೇದಕ್ಕೆ ಡಿಕ್ಕಿ ಹೋಡೆದ ಪರಿಣಾಮ ಅಪ್ಪಿ ಆಟೋ ವಾಹನದಲ್ಲಿ ಕುಳಿತ ಸೈನಸ್ ಗಂಡ ಅಲಿಚಾಂದ ಮತ್ತು ತಾನಾಜಿ ತಂದೆ ಲಕ್ಷ್ಮಣ ಇವರಿಗೆ ರಕ್ತಗಾಯ ಹಾಗೂ ಮೋಟಾರ ಸೈಕಲ್ ಚಾಲಕ ಸಂದೀಪ್ ಮುಂದಾಡಿ ಇವನಿಗೆ ಹಣೆಯ ಮೇಲೆ ಎಡಕಾಲಿನ ಮೇಲೆ ರಕ್ತಗಾಯವಾತರುತ್ತದೆ ಅಂತ ಕೊಟ್ಟ ಫಿಯರ್ಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.